ಚಿನ್ನದ ಗಣಿ ಕಾರ್ಮಿಕ ಕುಟುಂಬಗಳಿಗೆ ಉದ್ಯೋಗಾವಕಾಶ; ಶಾಸಕಿ ಎಂ. ರೂಪಕಲಾ ಹೆಳಿಕೆ; 970 ಎಕರೆ ಪ್ರದೇಶದಲ್ಲಿ ಬೃಹತ್​ ಕೈಗಾರಿಕೆ ಸ್ಥಾಪನೆ ಭರವಸೆ

ಕೆಜಿಎ್​ ತಾಲೂಕಿನ ಮಾರಿಕುಪ್ಪಂನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು&ಕೊರತೆ ಸಭೆ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕಿ ಎಂ.ರೂಪಕಲಾ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಕೆಜಿಎ್​ ತಾಲೂಕಿನ ಮಾರಿಕುಪ್ಪಂನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು&ಕೊರತೆ ಸಭೆ ಹಾಗೂ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕಿ ಎಂ.ರೂಪಕಲಾ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
Published on

ಕೆಜಿಎಫ್​: ಕೆಜಿಎಫ್​ ತಾಲೂಕಿನ 970 ಎಕರೆ ಪ್ರದೇಶದಲ್ಲಿ ಬೃಹತ್​ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ, ಗಣಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗವಕಾಶ ಕಲ್ಪಿಸಲಾಗುವುದು ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ತಾಲೂಕಿನ ಮಾರಿಕುಪ್ಪಂನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು&ಕೊರತೆ ಸಭೆ ಹಾಗೂ ಜನಸ್ಪಂದನವನ್ನು ಉದ್ಘಾಟಿಸಿ ಮಾತನಾಡಿದರು.
ಪಡಿತರ ಚೀಟಿ, ವೃದ್ಧಾಪ್ಯ ವೇತನ, ಆಧಾರ್​ಕಾರ್ಡ್​, ವಿದ್ಯುತ್​ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಆದಾಯ ಪ್ರಮಾಣ ಪತ್ರ, ಸ್ವಚ್ಛತೆ ಸೇರಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ನೇರವಾಗಿ ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದೇವೆ ಎಂದರು.
20 ಕೋಟಿ ರೂ.ರಸ್ತೆಗಳ ಟೆಂಡರ್​: ನಗರದ ಸೂರಜ್​ಮಲ್​ ವೃತ್ತದಿಂದ ಮೊಯ್ದು ಪೆಟ್ರೋಲ್​ ಬಂಕ್​, ಅಂಬೇಡ್ಕರ್​ ಶಾಲೆಯವರೆಗೆ ಈಗಾಗಲೇ ಡಾಂಬರು ರಸ್ತೆ ಕಾಮಗಾರಿ ಮುಗಿದಿದ್ದು, ಸೂರಜ್​ಮಲ್​ ವೃತ್ತದಿಂದ ದಾಸ್​ ಚಿನ್ನ ಸವರಿ ಮನೆಯವರೆಗೂ ದ್ವಿಪಥ ರಸ್ತೆ, ಆ್ಯಂಡ್ರಸನ್​ ಪೇಟೆಯಿಂದ ರಾಜೇಶ್​ ಕ್ಯಾಂಪ್​ವರೆಗೂ ರಸ್ತೆ ಅಗಲೀಕರಣದ 20 ಕೋಟಿ ರೂ.ಕಾಮಗಾರಿ ಪ್ರಗತಿಯಲ್ಲಿದೆ ಎಂದು ರೂಪಕಲಾ ಹೇಳಿದರು.


68 ಕೋಟಿ ರೂ.ಕುಡಿಯುವ ನೀರಿನ ಕಾಮಗಾರಿ: ಬೇತಮಂಗಲದಿಂದ ಕೆಜಿಎಫ್​ವರೆಗೆ ಜನರ ಕುಡಿಯುವ ನೀರಿನ ಯೋಜನೆಗೆ 8 ಕಿಮೀ. ಹೊಸ ಪೈಪ್​ಲೈನ್​ ಕಾಮಗಾರಿ ಪೂರ್ಣಗೊಂಡಿದೆ. 200, 150 ಎಚ್​ಪಿ ಎರಡು ಬೃಹತ್​ ಮೋಟಾರ್​ ಅಳವಡಿಸಿ, ಕೆಜಿಎಫ್​ ನಗರಕ್ಕೆ ನೀರಿನ ಸರಬರಾಜು ಮಾಡಿ, 72 ಕಿ.ಮೀ ಉದ್ದದ ಟ್ಯಾಪ್​ ಮೂಲಕ ಮನೆ ಮನೆಗೂ ಕುಡಿಯುವ ನೀರು ಒದಗಿಸಲು ಕೋರ್​ಮಂಡಲ್​, ಪೈಪ್​ಲೈನ್​ ಹಾಗೂ ಜಲಮಂಡಳಿ ಹಿಂಭಾಗದಲ್ಲಿ ಮೂರು ಬೃಹತ್​ ನೀರಿನ ಟ್ಯಾಂಕ್​ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಶಾಸಕಿ ಹೇಳಿದರು.


ಜಲಮಂಡಳಿಯಿಂದ ನಗರದ 35 ವಾರ್ಡ್​ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ 25 ಕ್ಕೂ ಹೆಚ್ಚು ಕುಡಿಯುವ ನೀರಿನ ಟಕಗಳು ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುತ್ತಿವೆ. 13 ವಾರ್ಡ್​ಗಳಲ್ಲಿ 44 ಕೋಟಿ ರೂ.ಗಳ ಒಳಚರಂಡಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ನೀಡಲಾಗಿದೆ. ಪಾರಂಡಹಳ್ಳಿಯ ಉರಿಗಾಂ ಕೆರೆಯ ಬಳಿ 4 ಕೋಟಿ ರೂ. ವೆಚ್ಚದಲ್ಲಿ ಮಲಿನ ಶುದ್ಧೀಕರಣ ಘಟಕದ(ಎಸ್​ಟಿಪಿ) ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಶಾಸಕಿ ಎಂ. ರೂಪಕಲಾ ದ್ವಿಚಕ್ರವಾಹನದಲ್ಲಿ ತೆರಳಿದರು.

ಕೆಜಿಎ್​ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಶಾಸಕಿ ಎಂ. ರೂಪಕಲಾ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಪರಿಶೀಲಿಸಿದರು.
ಕೆಜಿಎ್​ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಲು ಶಾಸಕಿ ಎಂ. ರೂಪಕಲಾ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಪರಿಶೀಲಿಸಿದರು.


ನಗರಸಭೆ ಅಧ್ಯಕ್ಷ ವಳ್ಳಲ್​ ಮುನಿಸ್ವಾಮಿ ಮಾತನಾಡಿ, ನಗರದ 35 ವಾರ್ಡ್​ಗಳ ಸರ್ವತೋಮುಖ ಅಭಿವೃದ್ಧಿಗೆ 15 ಕೋಟಿ ರೂ. ಟೆಂಡರ್​ ಕರೆದಿದ್ದು, ನಗರೋತ್ಥಾನದ 40 ಕೋಟಿ ರೂ. ಕಾಮಗಾರಿಗಳಿಗೆ ಪ್ರಸ್ತಾವನೆ ಸಿದ್ಧಪಡಿಸಿ, ಟೆಂಡರ್​ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಗರದ ಪ್ರಮುಖ ರಸ್ತೆ&ಚರಂಡಿ ಅಭಿವೃದ್ಧಿಗೆ ಪ್ರತಿ ವಾರ್ಡ್​ಗೆ 90 ರಿಂದ 95 ಲಕ್ಷ ರೂ. ಅನುದಾನ ನೀಡಲಾಗಿದೆ. ಟೆಂಡರ್​ ಬಳಿಕ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು.
ನಗರಸಭೆ ಸದಸ್ಯರಾದ ಅನ್ಬಶಾಂತಿ, ಸನಾ, ಪೌರಾಯುಕ್ತೆ ಮಾಧವಿ ಇದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net