ಚಿತ್ರರಂಗದಿಂದ ದರ್ಶನ್‌ ನಿಷೇಧಿಸಲು ಒತ್ತಾಯ

darshan
Published on

ಚಿತ್ರದುರ್ಗ: ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಪ್ರಕರಣದಡಿ ನಟ ದರ್ಶನ್ ಗುರುತರ ಆರೋಪ ಎದುರಿಸುತ್ತಿದ್ದು, ಕನ್ನಡ ಚಿತ್ರರಂಗದಿಂದ ನಿಷೇಧಿಸುವಂತೆ ಕೋಟೆನಾಡಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಕ್ರಮ ಕೈಗೊಳ್ಳುವಂತೆ ರಾಜ್ಯ ಚಲನಚಿತ್ರ ಮತ್ತು ವಾಣಿಜ್ಯ ಮಂಡಳಿಗೆ ಕರವೇ ಸೇರಿ ಕೆಲ ಸಂಘಟನೆಗಳು ಒತ್ತಾಯಿಸಿವೆ. ಯಾವ ಕಾರಣಕ್ಕೂ ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ದರ್ಶನ್ ಚಿತ್ರ ಚಿತ್ರೀಕರಣವಾಗಲು ಬಿಡುವುದಿಲ್ಲ. ದುರ್ಗಕ್ಕೆ ಬಂದರೆ, ಕಪ್ಪು ಪಟ್ಟಿ ಪ್ರದರ್ಶಿಸಿ ಘೇರಾವ್ ಹಾಕುವುದಾಗಿ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net