

ಚಿತ್ರದುರ್ಗ: ಕೋಲ್ಕ್ಕತ್ತದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಕಾಲೇಜಿನ ಕಿರಿಯ ವೈದ್ಯರ ಪ್ರತಿಭಟನೆ ಬೆಂಬಲಿಸಿ, ಚಿತ್ರದುರ್ಗ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ಪದಾಧಿಕಾರಿಗಳು, ಸದಸ್ಯರು ನಗರ ದಲ್ಲಿರುವ ಸಂಘದ ಆವರಣದಲ್ಲಿ ಮಂಗಳವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು. ಐಎಂಎ ಜಿಲ್ಲಾಧ್ಯಕ್ಷ ಎನ್.ಪಾಲಾಕ್ಷಯ್ಯ, ಕಾರ‌್ಯದರ್ಶಿ ಡಾ.ಎನ್.ಬಿ.ಪ್ರಹ್ಲಾದ್, ಡಾ.ವಿಜಯಕುಮಾರ್,ಡಾ.ಕೆ.ಎಂ.ಬಸವರಾಜ್,ಡಾ.ಜಿ.ಟಿ.ತಿಪ್ಪಾರೆಡ್ಡಿ, ಡಾ.ತೋಯಿಜಾಕ್ಷಿಬಾಯಿ, ಡಾ.ಲಕ್ಷ್ಮೀ ಪ್ರಶಾಂತ್, ಡಾ.ಶಿಲ್ಪಾ, ಡಾ.ಟಿ.ನಾಗರಾಜ್, ಡಾ.ಚಂದ್ರಪ್ಪ, ಡಾ.ತಿಮ್ಮಾರೆಡ್ಡಿ ಕಾತರಕಿ ಇತರರು ಪ್ರತಿಭಟನೆಯಲ್ಲಿ ಇದ್ದರು.