ಚಿತ್ರದುರ್ಗಕ್ಕೆ ರಾಜ್ಯಪಾಲರ ಭೇಟಿ

CTD RAJAYAPALARU---
Published on

ಚಿತ್ರದುರ್ಗ: ಶಿವಮೊಗ್ಗ ಕುವೆಂಪು ವಿವಿ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ತೆರಳುತ್ತಿದ್ದ ರಾಜ್ಯಪಾಲ ಥಾವರ್‌ಚಂದ್‌ಗೆಹ್ಲೋತ್ ಅವರು ಮಾರ್ಗ ಮಧ್ಯೆ ಮಂಗಳವಾರ ಸಂಜೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದರು.

ಅವರನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ವೆಂಕಟೇಶ್‌ನಾಯ್ಕ, ಡಿವೈಎಸ್‌ಪಿ ಪಿ.ಕೆ. ದಿನಕರ್, ತಹಸೀಲ್ದಾರ್ ಡಾ. ನಾಗವೇಣಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ವಾಗತಿಸಿ, ಬೀಳ್ಕೊಟ್ಟರು.

ಲಘು ಉಪಹಾರ, ಚಹಾ ಸ್ವೀಕರಿಸಿದ ಬಳಿಕ ರಾಜ್ಯಪಾಲರು ಶಿವಮೊಗ್ಗಕ್ಕೆ ತೆರಳಿದರು. ಅವರ ಭೇಟಿ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ಪ್ರವಾಸಿ ಮಂದಿರದ ಬಳಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅವರ ಆಗಮನ ಹಾಗೂ ನಿರ್ಗಮನದ ಸಂದರ್ಭ ತಹಸೀಲ್ದಾರ್ ಕಚೇರಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net