ಚರಂಡಿ ಸ್ವಚ್ಛಗೊಳಿಸಿದ ಗ್ರಾಪಂ

23ald 3 clean
ಆಲ್ದೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಕನಕ ರೆಡ್ಡಿ ಭೇಟಿ ನೀಡಿ ಆಸ್ಪತ್ರೆಯ ಆವರಣ ಪರಿಶೀಲಿಸಿದರು.
Published on

ಆಲ್ದೂರು: ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ಚರಂಡಿಯನ್ನು ಗ್ರಾಪಂ ಸ್ವಚ್ಛಗೊಳಿಸಿದೆ.

ಕೊಳಚೆ ನೀರು ಆಸ್ಪತ್ರೆಯ ಆವರಣದೊಳಗೆ ಹರಿದು ಆವರಣ ಕಸ ಕಡ್ಡಿಗಳಿಂದ ತುಂಬಿ ಕೆಸರು ತುಂಬಿಕೊಂಡು ತೊಂದರೆಯಾಗಿರುವ ಕುರಿತು ಮೇ 20ರಂದು ವಿಜಯವಾಣಿಯಲ್ಲಿ ವರದಿ ಪ್ರಕಟವಾಗಿದ್ದು ಇದನ್ನು ಗಮನಿಸಿ ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದರು.

ತಾಲೂಕು ಆರೋಗ್ಯ ಅಧಿಕಾರಿ ಸೀಮಾ ಹಾಗೂ ಸಿಬ್ಬಂದಿ ಗ್ರಾಪಂಗೆ ಭೇಟಿ ನೀಡಿ ಆಸ್ಪತ್ರೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದರು. ವರದಿ ಪ್ರಕಟವಾದ ನಂತರ ಆಲ್ದೂರು ಗ್ರಾಪಂಯಿಂದ ನೀರಿನ ಟ್ಯಾಂಕ್ ನೀಡಿ ಆಸ್ಪತ್ರೆಯ ಮುಂದಿನ ಚರಂಡಿಯನ್ನು ಶುಕ್ರವಾರ ಸ್ವಚ್ಛಗೊಳಿಸಿದ್ದರು.

ಜಿಲ್ಲಾ ಪಂಚಾಯತ್‌ರಾಜ್ ಇಂಜಿನಿಯರ್ ವಿಭಾಗದ ರವಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚೇತನ್, ಹಿರಿಯ ಇಂಜಿನಿಯರ್ ಸಂತೋಷ್ ಕಾಮತ್ ಭೇಟಿ ನೀಡಿ ಸರ್ಕಾರಿ ಆಸ್ಪತ್ರೆಯ ಆವರಣದ ಸ್ಥಳ ಪರಿಶೀಲಿಸಿದರು. ಆಸ್ಪತ್ರೆಯ ಮುಂಭಾಗ ಹಾಗೂ ಸುತ್ತಮುತ್ತಲಿನ ಆವರಣ ಸಮತಟ್ಟು ಮಾಡಿ, ವೆಟ್‌ಮಿಕ್ಸ್ ಹಾಕಿ, ಇಂಟರ್ ಲಾಕ್ ಅಳವಡಿಸುವಂತೆ ಗುತ್ತಿಗೆದಾರ ಇಬ್ರಾಹಿಂ ಅವರಿಗೆ ತಿಳಿಸಿ ತಕ್ಷಣ ಕೆಲಸ ಆರಂಭ ಮಾಡುವಂತೆ ಮೌಖಿಕವಾಗಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net