ಚಪ್ಪರದಹಳ್ಳಿ ಸಹಕಾರ ಸಂಘಕ್ಕೆ 19.03 ಲಕ್ಷ ರೂ.ನಿವ್ವಳ ಲಾಭ

13BTP01
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಸಿಇಒ ಹುಚ್ಚಪ್ಪ ಮಾತನಾಡಿದರು. ಎನ್.ಪ್ರಸನ್ನ ಕುಮಾರ, ಬಾಲಕೃಷ್ಣ, ಸಿ.ಆರ್.ಪ್ರಸನ್ನ, ರಾಜಶೇಖರ್, ಚಂದ್ರನಾಯಕ, ಸಿ.ಜೆ.ರವಿ, ಸಿ.ಎನ್.ಕೃಷ್ಣೆಗೌಡ, ಸಂಜು, ನಾಗರಾಜು, ಸುಶೀಲಾ, ಮಂಜುಳಾ, ಬಸಮ್ಮ, ಗುಮಾಸ್ತ ಸಿ.ಕೆ.ಮಂಜುನಾಥ್ ಇದ್ದರು.
Published on

ಬೆಟ್ಟದಪುರ: ಸಮೀಪದ ಚಪ್ಪರದಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-2023ನೇ ಸಾಲಿಗೆ 19,03,544 ರೂ.ನಿವ್ವಳ ಲಾಭಗಳಿಸಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುಚ್ಚಪ್ಪ ಹೇಳಿದರು.


ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು ಈ ಬಾರಿ ಹೆಚ್ಚು ಲಾಭ ಗಳಿಸಿದೆ. ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬ ಸದಸ್ಯರ ಸಹಕಾರ ಮುಖ್ಯವಾಗಿದೆ. ಸಂಘದಿಂದ ಸಾಲ ಪಡೆದ ಸಾಲಗಾರರು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಿಗುವಂಥ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.


ಸಂಘದ ಅಧ್ಯಕ್ಷ ಸಿ.ಎನ್.ಪ್ರಸನ್ನ ಕುಮಾರ, ಉಪಾಧ್ಯಕ್ಷ ಬಾಲಕೃಷ್ಣ, ನಿರ್ದೇಶಕರಾದ ಸಿ.ಆರ್.ಪ್ರಸನ್ನ, ರಾಜಶೇಖರ್, ಚಂದ್ರನಾಯಕ, ಸಿ.ಜೆ.ರವಿ, ಸಿ.ಎನ್.ಕೃಷ್ಣೇಗೌಡ, ಸಂಜು, ನಾಗರಾಜು, ಸುಶೀಲಾ, ಮಂಜುಳಾ, ಬಸಮ್ಮ, ಗುಮಾಸ್ತ ಸಿ.ಕೆ.ಮಂಜುನಾಥ್, ಮಾರಾಟ ಗುಮಾಸ್ತ ಎಂ.ಆರ್.ಯೋಗಾನಂದ, ಸಿಬ್ಬಂದಿ ಅವಿನಾಶ್, ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net