ಗ್ರಾಹಕರ ವಿಶ್ವಾಸಾರ್ಹ ಸಂಸ್ಥೆ ಕಿರ್ಲೋಸ್ಕರ್

ಗ್ರಾಹಕರ ನಂಬಿಕೆಯ ಹಾಗೂ ವಿಶ್ವಾಸಾರ್ಹ ಸಂಸ್ಥೆಯಾಗಿರುವ ಕಿರ್ಲೋಸ್ಕರ್ ಸೋಲಾರ್ ಸಂಸ್ಥೆಯು ಸೌರಶಕ್ತಿ ಕ್ಷೇತ್ರದ ಉತ್ಪನ್ನಗಳ ತಯಾರಿಕೆಯಲ್ಲೂ ಸಾಧನೆ ತೋರಿದೆ. ಅತ್ಯುತ್ತಮ ಬ್ರಾೃಂಡ್‌ನ ಉತ್ಪನ್ನಗಳನ್ನು ಮಾರುಕಟ್ಟೆಗೆ ನೀಡಿದೆ ಎಂದು ಸಂಸ್ಥೆಯ ಸೇಲ್ಸ್ ಹೆಡ್ ಸುರೇಶ್ ಕುಮಾರ್ ತಿಳಿಸಿದರು.
4
Published on

ಗ್ರಾಹಕರ ನಂಬಿಕೆಯ ಹಾಗೂ ವಿಶ್ವಾಸಾರ್ಹ ಸಂಸ್ಥೆಯಾಗಿರುವ ಕಿರ್ಲೋಸ್ಕರ್ ಸೋಲಾರ್ ಸಂಸ್ಥೆಯು ಸೌರಶಕ್ತಿ ಕ್ಷೇತ್ರದ ಉತ್ಪನ್ನಗಳ ತಯಾರಿಕೆಯಲ್ಲೂ ಸಾಧನೆ ತೋರಿದೆ. ಅತ್ಯುತ್ತಮ ಬ್ರಾೃಂಡ್‌ನ ಉತ್ಪನ್ನಗಳನ್ನು ಮಾರುಕಟ್ಟೆಗೆ ನೀಡಿದೆ ಎಂದು ಸಂಸ್ಥೆಯ ಸೇಲ್ಸ್ ಹೆಡ್ ಸುರೇಶ್ ಕುಮಾರ್ ತಿಳಿಸಿದರು.

ಕಿರ್ಲೋಸ್ಕರ್ ಸೋಲಾರ್ ಹಾಗೂ ತ್ರಿಶೂಲ್ ಎಲೆಕ್ಟ್ರಿಕಲ್ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ

ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಸೋಲಾರ್ ಎನರ್ಜಿ ಕಾನ್ಫರೆನ್ಸ್ ಉದ್ಘಾಟಿಸಿ ಮಾತನಾಡಿದರು.

ಕಿರ್ಲೋಸ್ಕರ್ ಕಂಪನಿ ಇಂದು ಕೇವಲ ಜನರೇಟರ್, ವಾಟರ್ ಪಂಪ್‌ಗೆ ಸೀಮಿತವಾಗಿಲ್ಲ. ಸೌರಶಕ್ತಿಯಲ್ಲೂ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದೆ. ತ್ರಿಶೂಲ್ ಎಲೆಕ್ಟ್ರಿಕಲ್ ಮೂಲಕ ಮೈಸೂರಿನ ನಾಗರಿಕರು ಕಿರ್ಲೋಸ್ಕರ್ ಉತ್ಪನ್ನ ಖರೀದಿಸಬಹುದಾಗಿದೆ ಎಂದರು.

ಸೌರಶಕ್ತಿ ವಿದ್ಯುತ್ ಬಳಕೆಯಿಂದ ಹಣ ಉಳಿತಾಯದೊಂದಿಗೆ ಆರ್ಥಿಕ ಸ್ವಾವಲಂಬನೆಯೂ ಸಾಧ್ಯ. ಸೋಲಾರ್‌ಗೆ ಹೂಡಿಕೆ ಮಾಡಿದ ಬಂಡವಾಳ ವಾಪಸ್ ಬರುವುದರಲ್ಲಿ ಯಾವುದೇ ಅನುಮಾನ ಬೇಡ. ಇದಕ್ಕೆ ಪೂರಕವಾಗಿರುವ ಕೇಂದ್ರದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಸೌರ ಮೇಲ್ಚಾವಣಿ(ಸೋಲಾರ್ ಪ್ಯಾನಲ್) ಅಳವಡಿಸಿ ಸಾಕಷ್ಟು ಲಾಭ ಪಡೆಯಬಹುದಾಗಿದೆ. ಒಂದು ಯೂನಿಟ್ ವಿದ್ಯುತ್ ಬಳಕೆಗೆ(ಖಾಸಗಿ) ಸರಾಸರಿ 10 ರೂ. ಇದೆ. 200 ಯೂನಿಟ್‌ಗೆ 2,000 ರೂ. ಆಗಲಿದೆ. ಅದೇ ಜಾಗದಲ್ಲಿ ಸೋಲಾರ್ ಪ್ಯಾನಲ್ ಬಳಕೆ ಮಾಡಿದರೆ ವಿದ್ಯುತ್ ಉಚಿತವಾಗುವ ಜತೆಗೆ ಹೂಡಿಕೆ ಮಾಡಿದ ಬಂಡವಾಳವೂ ವಾಪಸ್ ಬರಲಿದೆ ಎಂದು ಸುರೇಶ್ ಕುಮಾರ್ ಮಾಹಿತಿ ನೀಡಿದರು.

25 ವರ್ಷಗಳ ವಾರಂಟಿ:

ಕಿರ್ಲೋಸ್ಕರ್ ಸೋಲಾರ್ ಉತ್ಪನ್ನಗಳ ಡಿಸ್ಟ್ರಿಬ್ಯೂಟರ್ ಶ್ರೀನಿವಾಸ್ ಮಾತನಾಡಿ, ಕಿರ್ಲೋಸ್ಕರ್ ಸೋಲಾರ್ ಪ್ಯಾನಲ್‌ಗೆ 25 ವರ್ಷಗಳ ವಾರಂಟಿ ನೀಡಲಿದೆ. ಸೋಲಾರ್ ಪ್ಯಾನಲ್‌ಗೆ ಮಾಡುವ ಖರ್ಚನ್ನು 2-3 ವರ್ಷದಲ್ಲಿ ವಾಪಸ್ ಪಡೆಯಬಹುದಾಗಿದೆ. ಜತೆಗೆ ಸೋಲಾರ್ ಉತ್ಪನ್ನಗಳ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ಸೌರ ವಿದ್ಯುತ್‌ನ್ನು ಸರ್ಕಾರಕ್ಕೇ ಮಾರಾಟ ಮಾಡಿ ಹಣವನ್ನು ಗಳಿಸಬಹುದಾಗಿದೆ ಎಂದರು.

ಇದೇ ವೇಳೆ ಕಿರ್ಲೋಸ್ಕರ್ ಸೋಲಾರ್ ಉತ್ಪನ್ನಗಳ ಬಳಕೆದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು. ಕಿರ್ಲೋಸ್ಕರ್ ಸೋಲಾರ್‌ನ ಕರ್ನಾಟಕ ರಾಜ್ಯ ಮ್ಯಾನೇಜರ್ ಶಿವಕುಮಾರ್, ಆಡಿಟರ್ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net