

ಚಿತ್ರದುರ್ಗ: ನಗರದ ಲಕ್ಷ್ಮೀಬಜಾರ್‌ನಲ್ಲಿರುವ ಶ್ರೀ ಕಂಠೇಶ್ವರ ಜ್ಯುವೆಲರ್ಸ್ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆ ಗ್ರಾಹಕರನ್ನು ಸೆಳೆಯುತ್ತಿದೆ. ತಂದೆ ರು ದ್ರಪ್ಪ ಅವರಿಂದ ವ್ಯಾಪಾರ ವಹಿವಾಟನ್ನು ಕರಗತ ಮಾಡಿಕೊಂಡಿರುವ ಜುವೆಲರ್ಸ್ ಮಾಲೀಕ ಎ.ಆರ್.ಯೋಗೇಶ್, ನಗರದ ಎಪಿಎಂಸಿ ಮಂಡಿಯಲ್ಲಿ ಕಾಳುಕಡಿ, ಹತ್ತಿ ವಹಿವಾಟಿನಲ್ಲಿ ಹಲವು ವರ್ಷಗಳ ಕಾಲ ತೊಡಗಿಸಿಕೊಂಡಿದ್ದರು. ತಮ್ಮ 35 ನೇ ವರ್ಷದಲ್ಲಿ ಚಿನ್ನಾಭರಣ ವಹಿವಾಟನ್ನು ಸವಾಲಾಗಿ ಸ್ವೀಕರಿಸಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ.
ಚಿನ್ನಾಭರಣ ಮಾರಾಟಕ್ಕೆ ತಾವ್ಯಾಕೆ ಮುಂದಾಗಬಾರದೆಂದು ಆಲೋಚಿಸಿದ ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರ ಯೋ ಗೇಶ್, 2005 ಅಕ್ಟೋಬರ್ 29 ರಂದು ಆರಂಭಿಸಿದ ಮಳಿಗೆ ಈಗ 20 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ತಾವು ಬಯಸುವಂಥ ವಿನ್ಯಾಸದಲ್ಲಿ ಚಿನ್ನ, ವಜ್ರದ ಆಭರಣ ಹಾಗೂ ಬೆಳ್ಳಿ ಆಭರಣ ಹಾಗೂ ಬೆಳ್ಳಿಯ ಇತರೆ ವಸ್ತುಗಳು ಕಂಠೇಶ್ವರದಲ್ಲಿ ಮಾರಾಟಕ್ಕೆ ಲಭ್ಯವೆಂಬ ವಿಶ್ವಾಸ ಗ್ರಾಹಕರಲ್ಲಿ ಮೂಡಿಸುತ್ತಿದೆ. ವಿಶೇಷವಾಗಿ ಆಂಟಿಕ್ ಚಿನ್ನಾಭರಣ ಮಾರಾಟದಲ್ಲಿ ತಮ್ಮ ಮಳಿಗೆ ಹೆಸರಾಗಿದೆ ಎಂದು ಯೋಗೀಶ್ ಹೆಮ್ಮೆಯಿಂದ ಹೇಳುತ್ತಾರೆ.
ಆಂಟಿಕ್, ನವನವೀನ ವಿನ್ಯಾಸಗಳ ಬಂಗಾರದೊಡವೆಗಳು, ವಜ್ರಾಭರಣಗಳು , ಬೆಳ್ಳಿ ಆಭರಣಗಳು, ವಿವಿಧ ವಸ್ತುಗಳನ್ನು ಇಲ್ಲಿ ಖರೀದಿಸಿರುವ ಗ್ರಾಹಕರು ಮತ್ತೆ ತಮ್ಮ ಬೇಡಿಕೆಯ ಆಭರಣಗಳ ಖರೀದಿಗೆ ನಮ್ಮ ಮಳಿಗೆಗೆ ತಪ್ಪದೇ ಭೇಟಿ ಕೊಡುತ್ತಿದ್ದಾರೆ. ಈ ವಹಿವಾಟಿನಲ್ಲಿ ಗ್ರಾಹಕರ ವಿಶ್ವಾಸವನ್ನು ನಾವು ಪ್ರಮುಖವಾಗಿ ಗಳಿಸಿದ್ದೇವೆ. ನಮ್ಮಲ್ಲಿ ಶುದ್ಧ ಚಿನ್ನದ ಆಭರಣ ಹಾಗೂ ಬೆಳ್ಳಿ ಸ್ವಿಲರ್ ಆರ್ಟಿಕಲ್ ಹಾಗೂ ನ್ಯಾಚುರಲ್ ಡೈಮಂಡ್ ಆಭರಣಗಳ ಮಾರಾಟ ಮಾಡುತ್ತೇವೆ.
ಅದೇ ಶುದ್ಧತೆಯೊಂದಿಗೆ ಗ್ರಾಹಕರಿಂದ ಮರಳಿ ಖರೀದಿಸಿ ಹೊಸ ವಿನ್ಯಾಸಗಳನ್ನು ಅವರಿಗೆ ಮಾಡಿಕೊಡಲು ಸಿದ್ಧವಿದ್ದೇವೆ. ಗ್ರಾಹಕರು ತಾವು ಬಯಸುವ ವಿನ್ಯಾಸಗಳ ಆರ್ಡರ್ ಮಾಡಿದರೆ ಅವುಗಳನ್ನು ತರಿಸಿ ಮಾರಾಟ ಮಾಡುತ್ತೇವೆ. ಶೇ.7-1 ವರೆಗೆ ವಿಎ ಇದೆ, ಆದರೆ ನಮ್ಮಲ್ಲಿ ಮೇಕಿಂಗ್ ಶುಲ್ಕ ಇಲ್ಲ ಎನ್ನುತ್ತಾರೆ ಯೋಗೇಶ್.
ಕನಿಷ್ಠ 15 ಸಾವಿರ ರೂ.ಗಳಿಂದ ಗರಿಷ್ಠ 15 ಲಕ್ಷ ರೂ.ವರೆಗೆ ಡೈಮಂಡ್, 5 ಸಾವಿರ ರೂ.ಗಳಿಂದ ಗರಿಷ್ಠ 10 ಲಕ್ಷ ರೂ.ವರೆಗೆ ಚಿನ್ನದ ಒಡವೆಗಳು ಇಲ್ಲಿ ಲಭ್ಯ. ಬೆಳ್ಳಿ ಗೃಹ, ಪೂಜಾ ಸಾಮಗ್ರಿ, ಗಿಫ್ಟ್ ಆರ್ಟಿಕಲ್ ಇತ್ಯಾದಿಗಳು ದೊರಕುತ್ತವೆ. ಕಂಠೇಶ್ವರ ಸಿಲ್ಕ್ಸ್, ಕಿಚನ್ ವರ್ಲ್ಡ್ ಹಾಗೂ ಎಪಿಎಂಸಿ ವಹಿವಾಟು ಉಸ್ತುವಾರಿ ಸಹೋದರರಾದ ಸುರೇಶ್‌ಬಾಬು, ತಿಪ್ಪೇಸ್ವಾಮಿ ಹಾಗೂ ವಿಜಯಕುಮಾರ್ ಅವರದ್ದಾಗಿದೆ.
ಯೋಗೇಶ್ ಅವರ ಜುವೆಲ್ಲರಿ ವಹಿವಾಟಿಗೆ ಪತ್ನಿ ಜಿ.ಸಿ.ಶ್ವೇತಾ ಹಾಗೂ ಪುತ್ರ ಸಿ.ವೈ.ಅನೂಪ್ ಸಾಥ್ ನೀಡುತ್ತಿದ್ದಾರೆ. ಬಿಬಿಎ ಪದವೀಧರ ಸ್ಕಾಟ್‌ಲೆಂಡ್‌ನಲ್ಲಿ ಎಂಎಸ್ ಮಾಡಿರುವ ಅನೂಪ್, ಪ್ರಸ್ತುತ ವಜ್ರಾಭರಣ ಸಂಬಂಧಿಸಿದಂತೆ ಬೆಂಗಳೂರಲ್ಲಿ ತರಬೇತಿ ಪಡೆಯುತ್ತಿ ದ್ದಾರೆ.
ವಿವಿಧ ಆಕರ್ಷಕ ಯೋಜನೆಗಳು ಲಭ್ಯ
ಪ್ರತಿ ತಿಂಗಳು ಕನಿಷ್ಠ ಐದು ಸಾವಿರ ರೂ.ಗಳಂತೆ 10 ತಿಂಗಳು ಪಾವತಿಸುವ ಹಾಗೂ ಕನಿಷ್ಠ 2 ಸಾವಿರ ರೂ.ಗಳಂತೆ 10 ತಿಂಗಳು ಪಾ ವತಿಸುವ ಸ್ಕೀಂಗಳಿವೆ. 2 ಸಾವಿರ ರೂ. ಪಾವತಿಸುವ ಸ್ಕೀಂನಲ್ಲಿ ಒಂದು ತಿಂಗಳ ಬೋನಸ್ ಇದೆ.
----
ಕೋಟ್
ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್ ಆದರೂ, ವಹಿವಾಟು ಕೈ ಹಿಡಿದಿದೆ. ಜುವೆಲ್ಲರಿ ಬಿಜಿನೆಸ್ ನಮ್ಮ ಶಾಪ್ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವುದು ಹೆಮ್ಮೆಯ ವಿಚಾರ. ಹೀಗೆಯೇ ಗ್ರಾಹಕರ ನಂಬಿಕೆಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸದಾ ನಿಗಾ ವಹಿಸುತ್ತೇವೆ.
ಎ.ಆರ್.ಯೋಗೇಶ್, ಮಾಲೀಕರು, ಶ್ರೀ ಕಂಠೇಶ್ವರ ಜುವೆಲರ್ಸ್, ಚಿತ್ರದುರ್ಗ
----