ಗ್ರಾಹಕನಿಗೆ 13.69 ಲಕ್ಷ ರೂ. ವಂಚನೆ

Crime Logo
Published on

ಮೈಸೂರು: ಚಿನ್ನಾಭರಣ ವಾಡಿಕೊಡುವುದಾಗಿ ನಂಬಿಸಿ ಅಶೋಕ ರಸ್ತೆಯ ರಾಜ್ ಗೋಲ್ಡ್ ಸ್ಮಿತ್ ಅಂಗಡಿಯ ವಾಲೀಕ ರಾಜ್ ಕುವಾರ್ ಸೋನಿ ಗ್ರಾಹಕನಿಗೆ 13.69 ಲಕ್ಷ ರೂ. ವಂಚಿಸಿದ್ದಾನೆ ಎಂದು ಆರೋಪಿಸಿ ಗ್ರಾಹಕ ಕೂರ್ಗಳ್ಳಿಯ ನಿವಾಸಿ ಸಂತೋಷ್ ದೂರು ನೀಡಿದ್ದು, ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ ಕುವಾರ್ ಸೋನಿ ಅವರು ನಮಗೆ ಚಿನ್ನಾಭರಣ ವಾಡಿಕೊಡುವುದಾಗಿ ಹೇಳಿದ್ದು, ಅದಕ್ಕೆ ಹಂತ ಹಂತವಾಗಿ 13.69 ಲಕ್ಷ ರು. ಹಣ ನೀಡಿದ್ದು, ಬಳಿಕ ಚಿನ್ನಾಭರಣ ನೀಡದೆ ವಂಚನೆ ವಾಡಿದ್ದಾರೆ ಎಂದು ಗ್ರಾಹಕ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net