ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

13NSG1
Published on

ನೇಸರಗಿ: ಗ್ರಾಮೀಣ ಭಾಗದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ 10 ಲಕ್ಷ ರೂ., ಕೊಳದೂರ ಗ್ರಾಮದಲ್ಲಿ 7ಲಕ್ಷ ರೂ. ಹಾಗೂ ಮೇಕಲಮರ್ಡಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕಿತ್ತೂರು ಮತಕ್ಷೇತ್ರದ ಎಲ್ಲ ಗ್ರಾಮಗಳಿಗೂ ಮೂಲಸೌಕರ್ಯ ಒದಗಿಸಲಾಗುವುದು ಎಂದರು.

ಬೈಲಹೊಂಗಲ ಪಂಚಾಯತ್ ರಾಜ್ ಇಲಾಖೆಯ ಎಇಇ ಮಹೇಶ ಹೂಲಿ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ಯುವ ಮುಖಂಡ ಸಚಿನ ಪಾಟೀಲ, ನಜೀರ್ ತಹಸೀಲ್ದಾರ್, ಗ್ರಾಪಂ ಮಾಜಿ ಅಧ್ಯಕ್ಷ ಸೋಮಪ್ಪ ಉಪ್ಪಾರಡ್ಡಿ, ಪಿಡಿಒ ವನಜಾಕ್ಷಿ ಪಾಟೀಲ, ಎಂ.ಎಸ್. ದೇಯಣ್ಣವರ, ಶಿವಾನಂದ ಕುಂಕೂರ, ಎಪಿಎಂಸಿ ಮಾಜಿ ಅಧ್ಯಕ್ಷ ಭರಮಪ್ಪ ಸತ್ತೆಣ್ಣವರ, ಶಶಿಧರ ಪಾಟೀಲ, ಗುತ್ತಿಗೆದಾರ ವೈ.ಬಿ. ಮದನಬಾವಿ, ಹುಸೇನಸಾಬ್ ಕಿಲ್ಲೇದಾರ್ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net