ಗ್ರಾಮಾಂತರ ಪೋಲಿಸರಿಂದ ೫ ಜನ ಹಸುಗಳ ಕಳ್ಳರ ಬಂಧನ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸೀಮೆ ಹಸುಗಳು ಕಳ್ಳತನವಾಗುತ್ತಿದ್ದು, ಇದರ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಎಸ್.ಪಿ.ಬಿನಿಖಿಲ್ ನೇತೃತ್ವದಲ್ಲಿ ಕೋಲಾರ ಗ್ರಾಮಾಂತರ ಪೋಲಿಸರು ೫ ಜನ ಹಸುಗಳ್ಳರನ್ನು ಬಂಧಿಸಿ ಅವರಿಂದ ೫೧ ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಬುಲೇರೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಜು.೧೬ ರಂದು ಸಂಜೆ ೭ ಗಂಟೆ ಸಮಯದಲ್ಲಿ ಕೋಲಾರ ನಗರದ ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಬುಲೇರೋ ವಾಹನವನ್ನು ಗಸ್ತಿನಲ್ಲಿದ್ದ ಗ್ರಾಮಾಂತರ ಪೋಲಿಸರು ಕೊಂಡರಾಜನಹಳ್ಳಿ ಸಮೀಪ ವಾಹನವನ್ನು ತಪಾಸಣೆ ಮಾಡಿದಾಗ ಬುಲೇರೋ ವಾಹನದಲ್ಲಿ ಸಗಣಿ ಮತ್ತು ಗಂಜಲದ ವಾಸನೆ ಬಂದ ಕಾರಣ ಸೀಮೆ ಹಸುಗಳ ಕಳ್ಳತನ ವಾಹನ ಇರಬಹುದೆಂದು ಮಾಡಿರುವುದು ಅನುಮಾನಗೊಂಡು ಪೋಲಿಸರು ವಿಚಾರಣೆಗೆ ಒಳಪಡಿಸಿದಾಗ ಹಸುಗಳನ್ನು ಕಳ್ಳತನ ಮಾಡಿ ಮಾರಿ ಹಣವನ್ನು ಹಂಚಿಕೊAಡು ಉಳಿದ ಹಣ ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಕೋಲಾರ ನಗರದ ಸೈಯದ್ ನಿಜಾಂ (೨೪), ಮುಹೀನ್‌ಪಾಷ (೨೦), ಮುಷ್ಟಕ್ (೨೨), ಅಸೀಫ್‌ಪಾಷ (೨೧) ಶೇಖ್ ಕುತುಬ್‌ವುಲ್ಲಾ (೨೨) ಇವರನ್ನು ಬಂಧಿಸಿ ಅವರಿಂದ ಕೆ.ಎ-೦೭-ಬಿ-೯೨೮೭ ನಂಬರಿನ ಬುಲೇರೋ ವಾಹನವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಕಾಂತರಾಜು ನೇತೃತ್ವದಲ್ಲಿ ಹಸುಗಳ್ಳರನ್ನು ಬಂಧಿಸಿದ್ದಾರೆ.

ಚಿತ್ರ ೧೭ ಕೆ.ಎಲ್.ಆರ್. ೦೫ : ಹಸುಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಬುಲೇರೋ ವಾಹನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net