ಗ್ರಾಪಂ ಅಧ್ಯಕ್ಷರಾಗಿ ಉಮಾ ಆಯ್ಕೆ

IMG_20221226_113924_882
Published on

ಸಾಲಿಗ್ರಾಮ: ತಾಲೂಕಿನ ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕೆಂಚನಹಳ್ಳಿ ಗ್ರಾಮದ ಉಮಾ ಮಹದೇವ್ ಅವಿರೋಧ ಆಯ್ಕೆಯಾದರು.
ಜಯಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು 16 ಸದಸ್ಯರ ಪೈಕಿ ಇಬ್ಬರು ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಉಮಾ ಮಹದೇವ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಮಂಜುನಾಥ್ ಅವಿರೋಧ ಆಯ್ಕೆ ಪ್ರಕಟಿಸಿದರು.ಜೆಡಿಎಸ್ ಮುಖಂಡರಾದ ಅನೀಫ್ ಗೌಡ, ಶಿವಣ್ಣ, ಮಾದೇವ್, ರವಿ, ಸತೀಶ್, ಕಾಂಗ್ರೆಸ್ ಮುಖಂಡ ಯತಿರಾಜ್, ಪಿಡಿಒ ಪ್ರತಾಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net