ಗ್ರಂಥಾಲಯ ಪುಸ್ತಕಗಳ ಗೋದಾಮು ಅಲ್ಲ

HUN-JULY-11-1{MODURU LIBRARY}
ಹುಣಸೂರು ತಾಲೂಕು ಮೋದೂರು ಗ್ರಾ.ಪಂ.ವತಿಯಿಂದ ಸ್ಥಾಪಿಸಿದ ಸಾರ್ವಜನಿಕ ಗ್ರಂಥಾಲಯವನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಉದ್ಘಾಟಿಸಿದರು. ಅಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಎಂ.ಎಸ್.ಮಹದೇವಪ್ಪ, ಹೇಮಾ , ರಾಮಚಂದ್ರು, ಪಿಡಿಒ ಪ್ರಕಾಶ್ ಇತರರು ಇದ್ದರು.
Published on

ಹುಣಸೂರು: ಜ್ಞಾನ ಪ್ರಸಾರದ ಕೇಂದ್ರಗಳಾಗಿರುವ ಗ್ರಂಥಾಲಯಗಳನ್ನು ಸುಸ್ಥಿತಿಯಲ್ಲಿ ಇಡುವುದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಜನರು ಪ್ರಜ್ಞಾವಂತರಾಗಲು ಸಾಧ್ಯ ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಅಭಿಪ್ರಾಯಪಟ್ಟರು.


ತಾಲೂಕಿನ ಮೋದೂರು ಗ್ರಾಮ ಪಂಚಾಯಿತಿಯಿಂದ ಮಂಗಳವಾರ ಸಾರ್ವಜನಿಕ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿ, ಗ್ರಂಥ ಭಂಡಾರಗಳು ಕೇವಲ ಪುಸ್ತಕಗಳ ಗೋದಾಮುಗಳಾಗಿರದೆ, ಭವಿಷ್ಯದ ತಲೆಮಾರುಗಳನ್ನು ಸುಶಿಕ್ಷಿತರನ್ನಾಗಿಸುವ ಬೌದ್ಧಿಕ ಕೇಂದ್ರಗಳಾಗಿವೆ. ಅವುಗಳ ಸದ್ಬಳಕೆಯಿಂದ ನಾಗರಿಕತೆ ವಿಕಾಸ ಹೊಂದುತ್ತದೆ ಎಂದು ಹೇಳಿದರು.


ಗ್ರಾ.ಪಂ.ಪಿಡಿಒ ಪ್ರಕಾಶ್ ಮಾತನಾಡಿ, ಮೋದೂರು ಗ್ರಾ.ಪಂ.ಅತ್ಯಂತ ಚಿಕ್ಕ ಪಂಚಾಯಿತಿ ಆಗಿದ್ದು ಬರುವ ಸೀಮಿತ ಅನುದಾನ ದಲ್ಲಿ ಎಲ್ಲ ರಚನಾತ್ಮಕ ಕೆಲಸಗಳನ್ನೂ ಸದಸ್ಯರ ನೆರವಿನಿಂದ ಮಾಡಲಾಗುತ್ತಿದೆ ಎಂದರು.


ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭಾಸ್ಕರ್, ಸದಸ್ಯರಾದ ಎಂ.ಎಸ್.ಮಹದೇವಪ್ಪ, ಹೇಮಾ ಹೇಮಂತರಾಜ್, ಗೌರಮ್ಮ, ರಾಮಚಂದ್ರು, ಶೇಖರ್, ಮುಖ್ಯ ಶಿಕ್ಷಕರಾದ ವಿ.ಪ್ರಸನ್ನ, ಮಹೇಶ್, ಶಶಿಕುಮಾರ್, ಗ್ರಾ.ಪಂ.ನೌಕರರಾದ ಪ್ರದೀಪ್, ಸಂಧ್ಯಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net