ಗೋವಾದಲ್ಲಿ ಕನ್ನಡಿಗನ ಮೇಲೆ ಹಲ್ಲೆ

Published on

ಪಣಜಿ: ಬದುಕು ಕಟ್ಟಿಕೊಳ್ಳಲು ಗೋವಾಕ್ಕೆ ಬಂದಿದ್ದ ವಿಜಯಪುರ ಮೂಲದ ಕನ್ನಡಿಗನ ಮೇಲೆ ಹಲ್ಲೆ ನಡೆಸಲಾಗಿದೆ. ವಿಜಯಪುರ ಕಲಕೇರಿ ಗ್ರಾಮದ ಟ್ರಕ್ ಚಾಲಕ-ಮಾಲೀಕ ಅನಿಲ್ ರಾಠೋಡ್ ಹಲ್ಲೆಗೊಳಗಾದ ಕನ್ನಡಿಗ. ಸುಮಾರು 6 ತಿಂಗಳಿಂದ ಸ್ಥಳೀಯ ಟ್ರಕ್ ಅಸೋಸಿಯೇಶನ್ ತೊಂದರೆ ಕೊಡುತ್ತಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಹಲ್ಲೆಗೊಳಗಾದ ಅನಿಲ್‌ನನ್ನು ಬಾಂಬೋಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡಿಗರು ಟ್ರಕ್ ಚಾಲಕರಾಗಿ ಸೇರಿಕೊಂಡು ನಂತರ ಸ್ವಂತ ಟ್ರಕ್ ಖರೀದಿಸಿ ಗೋವಾದ ಜನರ ವ್ಯವಹಾರವನ್ನು ಹಾಳುಮಾಡುತ್ತಿದ್ದಾರೆ ಎಂಬ ಕಾರಣವನ್ನಿಟ್ಟುಕೊಂಡು ಸ್ಥಳೀಯ ಟ್ರಕ್ ಅಸೋಸಿಯೇಶನ್‌ನವರು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಅನಿಲ್ ರಾಠೋಡ್ ಮರಳು ಸಾಗಾಟ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪರವಾನಗಿಯನ್ನೂ ಪಡೆದುಕೊಂಡಿದ್ದರು. ಕಳೆದ 6 ತಿಂಗಳಲ್ಲಿ ಇಂತಹದ್ದೇ ಪ್ರತ್ಯೇಕ 3 ಘಟನೆಗಳು ನಡೆದಿವೆ. ಗೋವಾದಲ್ಲಿ ಕನ್ನಡಿಗರು ದುಡಿದು ಜೀವನ ಕಟ್ಟಿಕೊಳ್ಳುವುದು ತಪ್ಪೇ? ಕನ್ನಡಿಗರ ಮೇಲೆ ಪದೇ ಪದೆ ದಬ್ಬಾಳಿಕೆ ನಡೆಸುತ್ತಿರುವುದೇಕೆ ? ಎಂದು ಕನ್ನಡ ಸಂಘಟನೆಗಳು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net