

ಗೋವಾ ಪ್ರವಾಸಕ್ಕೆ ತೆರಳಿದ್ದ ಮಾನಸಿ ನಗರದ ನಿವಾಸಿ, ವೈದ್ಯ ಡಾ.ಸಿದ್ದರಾಮು ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿ 7 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ಖದೀಮರು ದೋಚಿದ್ದಾರೆ.
ಮೇ 9 ರಂದು ಡಾ.ಸಿದ್ದರಾಮು ಅವರು ಗೋವಾ ಪ್ರವಾಸಕ್ಕೆ ತೆರಳಿದ್ದು, ಮೇ 9 ರಂದು ಹಿಂದಿರುಗಿದ್ದಾರೆ. ಈ ವೇಳೆ ಮನೆಯ ಟೇರೆಸ್‌ನ ಬಾಗಿಲು ತೆರೆದಿದ್ದುಘಿ, ಮನೆಯ ಕೋಣೆಯ ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ದೋಚಲಾಗಿದೆ ಎಂದು ಮನೆ ಮಾಲೀಕರು ದೂರು ನೀಡಿದ್ದಾರೆ
ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.