ಗೊಲ್ಲ-ಕುರುಬರಿಗೆ ಬೇಕು ಎಸ್ಟಿ ಮೀಸಲು

ESHWARANDAPURI SWAMIJI, HSD (2)
Published on

ಚಿತ್ರದುರ್ಗ: ಎಲ್ಲ ಸಮುದಾಯಗಳ ಬಡವರಿಗೆ ಮೀಸಲಾತಿ ಅಗತ್ಯವಿದ್ದು, ಒಗ್ಗಟ್ಟಿನಿಂದ ಮಾತ್ರ ಪಡೆಯಲು ಸಾಧ್ಯ ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ಯಾದವ ಮಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕುರುಬರು, ಯಾದವರು ಅಣ್ಣ-ತಮ್ಮಂದಿರಂತೆ. ಅಲ್ಲದೆ, ಎಸ್ಟಿ ಮೀಸಲಾತಿ ಪಡೆಯುವ ಅರ್ಹತೆ ಇವೆ. ಹೀಗಾಗಿ ಸರ್ಕಾರಗಳು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು. ಯಾವುದೇ ಸಮುದಾಯವಾಗಲಿ ಒಳಪಂಗಡಗಳನ್ನು ಬದಿಬಿಟ್ಟು ಮೀಸಲಾತಿ ಪಡೆಯಲು ಸಂಘಟಿತರಾಗಬೇಕು ಎಂದು ಕಿವಿಮಾತು ಹೇಳಿದರು.

ನಾವು ಒಗ್ಗೂಡಿ ಸಮಾವೇಶ ಮಾಡಿದರೆ, ಅದನ್ನು ಜಾತಿ ಸಮಾವೇಶ ಎಂದು ಬಿಂಬಿಸುತ್ತಾರೆ. ಮೇಲ್ವರ್ಗದವರು ಮಾಡಿದಲ್ಲಿ ಅದನ್ನು ಧರ್ಮ ಸಭೆ ಅಂತಾರೆ. ಈ ಕುರಿತು ನಮ್ಮಲ್ಲಿ ಎಚ್ಚರಿಕೆ ಇರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net