

ತಲಕಾಡು: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ವಿಶ್ವಾಸವ್ಯಕ್ತಪಡಿಸಿದರು.
ಇಲ್ಲಿನ ಕನಕನಗರದ ಶ್ರೀಬೀರೇಶ್ವರ ದೇವಾಲಯಕ್ಕೆ ಗುರುವಾರ ಭೇಟಿ ನೀಡಿದ್ದ ಶಾಸಕರು, ಅಲ್ಲಿ ಹಾಜರಿದ್ದ ಐವತ್ತಕ್ಕೂ ಹೆಚ್ಚಿನ ಕನಕನಗರದ ಮುಖಂಡರನ್ನು ಪಕ್ಷದ ಶಾಲು ಹೊದಿಸಿ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.
ಕರೊನಾ ಸಂಕಷ್ಟ ಕಾಲದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿದ ಸೀಮಿತ ಅನುದಾನದಲ್ಲೇ ಪಕ್ಷಾತೀತವಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಜೆಡಿಎಸ್ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಸಿದ್ಧ ಪ್ರವಾಸಿ ತಾಣ ತಲಕಾಡು ಸೇರಿದಂತೆ ತಿ.ನರಸೀಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮತ್ತಷ್ಟು ಅಭಿವೃದ್ಧಿಪಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಕನಕ ನಗರದ ಮುಖಂಡ ಸಿ.ರಾಜಣ್ಣ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಎಂ.ಚಿನ್ನಸ್ವಾಮಿ, ಮೂಗೂರು ಶಿವಮೂರ್ತಿ, ಕನಕನಗರದ ಆಟೋ ಶಿವಮೂರ್ತಿ, ಮರಿಸ್ವಾಮಿ, ಶಾಂತರಾಜು, ಬಿ.ಶೆಟ್ಟಹಳ್ಳಿ ಗ್ರಾಪಂ ಸದಸ್ಯ ಕುಕ್ಕೂರು ಕೆ.ಎಲ್.ಉಮಾಪತಿ, ಜೆಡಿಎಸ್ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಯಶೋದಮ್ಮ ಮತ್ತಿತರರು ಹಾಜರಿದ್ದರು.