ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ

Published on

ಮೈಸೂರು: ನಗರದ ನಂಜನಗೂಡು ರಸ್ತೆಯಲ್ಲಿ ಶನಿವಾರ ಗೂಡ್ಸ್ ವಾಹನಕ್ಕೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕಟ್ಟಡ ಕಾರ್ಮಿಕ ಮೃತಪಟ್ಟಿದ್ದಾರೆ. ರಾಮಕೃಷ್ಣನಗರ ನಿವಾಸಿ ಎಂ.ಮಹೇಶ್ (40) ಮೃತರು.
ಮಹೇಶ್ ಕೆಲಸದ ನಿಮಿತ್ತ ದಡದಕಲ್ಲಹಳ್ಳಿಗೆ ಹೋಗಿ ಶನಿವಾರ ರಾತ್ರಿ ವಾಪಸ್ ಬರುವಾಗ, ಮುಂದೆ ಹೋಗುತ್ತಿದ್ದ ಗೂಡ್ಸ್ ವಾಹನದ ಚಾಲಕ ವಾಹನವನ್ನು ತಕ್ಷಣವೇ ನಿಲ್ಲಿಸಿ ಮುಂದಿನ ಬಾಗಿಲನ್ನು ತೆರೆದಿದ್ದಾನೆ. ಈ ವೇಳೆ ಬೈಕ್ ನಿಯಂತ್ರಣಕ್ಕೆ ತರಲಾರದೆ ಮಹೇಶ್ ಬಾಗಿಲು ತಾಗಿ ಗುದ್ದಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಸಾರ್ವಜನಿಕರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net