ಗೂಡ್ಸ್ ಇಂಜಿನ್ ಸಮಸ್ಯೆ, ರೈಲುಗಳ ಸಂಚಾರ ವ್ಯತ್ಯಯ

Published on

ಕಲಬುರಗಿ: ನೆರೆಯ ತೆಲಂಗಾಣದ ತಾಂಡೂರ ಹತ್ತಿರದ ಧಾರೂರ್ ಬಳಿ ಗೂಡ್ಸ್ ರೈಲಿನ ಇಂಜಿನ್ ನಲ್ಲಿ ಸಮಸ್ಯೆ.

*ಹಳಿ ಮೇಲೆಯೇ ನಿಂತ ಗೂಡ್ಸ್ ರೈಲು. ತಾಂಡೂರ ಮಾರ್ಗವಾಗಿ ಕಲಬುರಗಿ, ಬೀದರ್, ಹೈದರಾಬಾದ್ ಕಡೆಗೆ ಹೋಗುವ-ಬರುವ ರೈಲು ಸಂಚಾರ ಸುಮಾರು ಒಂದೂವರೆ ಗಂಟೆ ಸ್ಥಗಿತ.
*ಬೆಳಗ್ಗೆ 9ರ ಸುಮಾರಿಗೆ ಹಳಿ‌ ಮೇಲೆ ಕೆಟ್ಟು ನಿಂತ ಗೂಡ್ಸ್ ರೈಲು.‌ ಇಂಜಿನ್ ನಲ್ಲಿ‌ ಕಾಣಿಸಿದ ತಾಂತ್ರಿಕ ಸಮಸ್ಯೆ.

*ಜೋರು ಮಳೆ ಮಧ್ಯೆಯೇ ಅಲ್ಲಲ್ಲಿ ನಿಂತ ಪ್ಯಾಸೆಂಜರ್, ಎಕ್ಸ್‌ಪ್ರೆಸ್‌ ರೈಲುಗಳು. ಪ್ರಯಾಣಿಕರ ಪರದಾಟ. ತ್ವರಿತಗತಿಯಲ್ಲಿ ನಡೆಸಿದ ದುರಸ್ತಿ ಕಾರ್ಯ. 11ರಿಂದ ಮತ್ತೆ ಶುರುವಾದ ರೈಲು ಸಂಚಾರ.

*ಒಂದೊಂದು ರೈಲುಗಳಿಗೆ ಗ್ರೀನ್ ಸಿಗ್ನಲ್. ಕನಿಷ್ಠ ಎರಡು ತಾಸು ಪರದಾಡಿದ ಪ್ರಯಾಣಿಕರು.
ಹುಬ್ಬಳ್ಳಿ-ಹೈದರಾಬಾದ್
ಯಶವಂತಪುರ-ಗೋರಖಪುರ
ಮುಂಬಯಿ-ಹೈದರಾಬಾದ್ (ಹುಸೇನಸಾಗರ)
ಎಲ್ಟಿಟಿ-ಸಿಕಿಂದರಾಬಾದ್ (ದುರಂತೋ ಎಕ್ಸ್‌ಪ್ರೆಸ್‌) ಸಂಚಾರ ಆರಂಭ.

  • ಸಮಸ್ಯೆಯಿಂದಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ನಿಗದಿತ ಸ್ಥಳಕ್ಕೆ ಹೋಗಲು ಎರಡು ಗಂಟೆ ಆಗಲಿದೆ ತಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net