ಗುರ್ಜಾಪುರ ಬ್ಯಾರೇಜ್ ಗೇಟ್ ಓಪನ್

IMG-20220720-WA0002.jpg
Published on

ರಾಯಚೂರು

ರಾಯಚೂರು ತಾಲೂಕಿನ ಗುರ್ಜಾಪುರ ಬಳಿ ನಿರ್ಮಿಸಲಾಗಿರುವ ಬ್ರಿಜ್ ಕಂ ಬ್ಯಾರೇಜ್

ಹಲವು ದಿನಗಳ ಹರಸಾಹಸದ ನಂತರ ಕೊನೆಗೂ ಓಪನ್ ಆದ ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ನ 194 ಗೇಟ್ ಗಳು.

ರಾಯಚೂರು ತಾಲೂಕಿನ ಗುರ್ಜಾಪುರ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಬ್ರಿಡ್ಜ ಕಂ ಬ್ಯಾರೇಜ್ ನ ಗೇಟ್ ಗಳು.

ಬೇಸಿಗೆಯಲ್ಲಿ RTPS, YTPS ಘಟಕಗಳಿಗೆ ನೀರೊದಗಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಬ್ರಿಜ್ ಕಂ ಬ್ಯಾರೇಜ್.

ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ನ ಗೇಟ್ ಗಳು ಓಪನ್ ಆಗದ ಹಿನ್ನೆಲೆ ಆತಂಕ ಸೃಷ್ಟಿಯಾಗಿತ್ತು

ಇದ್ರಿಂದಾಗಿ ಗುರ್ಜಾಪುರ, ಅರಿಷಿಣಿಗಿ ಸೇರಿದಂತೆ ಕೆಲ ಗ್ರಾಮಗಳಿಗೆ ಹಿನ್ನೀರು ನುಗ್ಗುವ ಭೀತಿ ಎದುರಾಗಿತ್ತು.

ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಬಿಟ್ಟಿದ್ರಿಂದ ಗೇಟ್ ಗಳು ಓಪನ್ ಆಗಿರಲಿಲ್ಲ.

ಹೀಗಾಗಿ ಕೇರಳದ ತಜ್ಞರ ತಂಡ ಬಂದಿದ್ರೂ ಓಪನ್ ಆಗಿರಲಿಲ್ಲ ಬ್ಯಾರೇಜ್ ನ 100 ಗೇಟ್ ಗಳು.

ನಿನ್ನೆಯಿಂದ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ರಿಂದ ಹಗಲು ರಾತ್ರಿ ಕಾರ್ಯಾಚರಣೆ

ಹಗಲು ರಾತ್ರಿ ಕಾರ್ಯಾಚರಣೆ ಮಾಡಿ ಕೊನೆಗೂ ಗೇಟ್ ಗಳನ್ನ ಓಪನ್ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net