ಗುರುವಿನ ಮಾರ್ಗದರ್ಶನದಲ್ಲಿ ಸಾಗಲಿ

10ckd5
Published on

ಚಿಕ್ಕೋಡಿ: ಗುರುಪೂರ್ಣಿಮೆ ಜೀವನಕ್ಕೆ ಮಾರ್ಗದರ್ಶನ ನೀಡಿದ ಗುರುಗಳನ್ನು ನೆನೆಯುವ ದಿನವಾಗಿದೆ. ಗುರುಗಳು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಜೀವನ ಸಾರ್ಥಕವಾಗುವುದು ಎಂದು ಸಾಯಿ ಸೇವಾ ಪರಿವಾರದ ರೂವಾರಿ ಜಗದೀಶ ಕವಟಗಿಮಠ ಹೇಳಿದರು.

ಇಲ್ಲಿನ ಶಿರಡಿ ಸಾಯಿ ಬಾಬಾ ಮಂದಿರದ ಸಾಯಿ ಸೇವಾ ಪರಿವಾರ ಗುರುಪೂರ್ಣಿಮೆ ಅಂಗವಾಗಿ ರಿಕ್ಷಾ ನಿಲ್ದಾಣ ಬಳಿ ಸಾರ್ವಜನಿಕರಿಗೆ ಅನ್ನಪ್ರಸಾದ ವ್ಯವಸ್ಥೆಗೆ ಸಂಪಾದನಾ ಸ್ವಾಮೀಜಿ ಸಮ್ಮುಖದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಸಂಪಾದನಾ ಸ್ವಾಮೀಜಿ ಮಾತನಾಡಿ, ಗುರುಪೂರ್ಣಿಮೆ ಗುರು ಮತ್ತು ಶಿಷ್ಯರ ನಡುವಿನ ಬಾಂಧವ್ಯ ಗೌರವಿಸುವುದಕ್ಕಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಪಾತ್ರ ತುಂಬ ವಿಶೇಷವಾಗಿದೆ. ಸಾಯಿ ಸೇವಾ ಪರಿವಾರದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಸೇರಿ ಬ್ರಹಸ್ಪತಿ ಹೋಮ ಜರುಗಿದವು. ವರ್ತಕರಾದ ಚಿದಾನಂದ ಹಿರೇಮಠ, ದುಂಡೇಶ ಪಾಟೀಲ, ಪುರಸಭೆ ಅಧ್ಯಕ್ಷೆ ವೀಣಾ ಕವಟಗಿಮಠ, ಸದಸ್ಯ ಸಂಜಯ ಕವಟಗಿಮಠ, ಸುಭಾಷ ಕವಲಾಪುರೆ, ಆದಿನಾಥ ಶೆಟ್ಟಿ, ರವಿ ಅಶ್ವತ್ಥಪುರ, ಅಜಿತ್ ಪಾಠಕ, ರಾಜು ಹಿರೇಮಠ, ಮಡಿವಾಳಪ್ಪ ಬಸರ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net