ಗುಡುಗು ಸಹಿತ ಅಬ್ಬರಿಸಿದ ಮಳೆ

ಗುಡುಗು ಸಹಿತ ಅಬ್ಬರಿಸಿದ ಮಳೆ
Published on


ಅರಕಲಗೂಡು: ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಸುರಿದ ವರ್ಷಧಾರೆ ರೈತಾಪಿ ವರ್ಗದ ಜನರಲ್ಲಿ ಹರ್ಷ ಮೂಡಿಸಿದೆ.


ಗುಡುಗು ಸಹಿತ ಅಬ್ಬರಿಸಿದ ಭಾರಿ ಮಳೆಗೆ ಕೆರೆ ಕಟ್ಟೆಗಳು ಭರ್ತಿಯಾಗಿ ಹಲವೆಡೆ ಕೋಡಿ ಬಿದ್ದಿವೆ. ಒಣಗುತ್ತಿದ್ದ ಬೆಳೆಗಳು ಚೇತರಿಸಿಕೊಳ್ಳುತ್ತಿವೆ. ಕಳೆದೊಂದು ತಿಂಗಳಿನಿಂದ ಮಳೆಯಿಲ್ಲದೆ ಕಂಗೆಟ್ಟಿದ್ದ ರೈತರು ವರುಣನ ಆಗಮನದಿಂದ ಸಂತಸಗೊಂಡಿದ್ದಾರೆ.


ಬಾಯ್ತೆರೆದ ಗುಂಡಿಗಳು: ಭಾರಿ ಮಳೆ ಹೊಡೆತಕ್ಕೆ ತಾಲೂಕಿನ ಕೆಲವೆಡೆ ಹದಗೆಟ್ಟು ಹೋಗಿದ್ದ ರಸ್ತೆಗಳಲ್ಲಿ ಗುಂಡಿಗಳ ಬಾಯ್ತೆರೆದು ಹೊಂಡಗಳಾಗಿವೆ. ಕೆಸರು ಗುಂಡಿ ರಸ್ತೆಯಲ್ಲಿ ವಾಹನಗಳ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಸವಾಪಟ್ಟಣ, ರಾಮನಾಥಪುರ ಮತ್ತಿತರೆಡೆ ಕೊಣನೂರು- ಮೈಸೂರು ಮಾರ್ಗದ ರಸ್ತೆ ಕೆಸರು ಗುಂಡಿಯಾಗಿ ಬದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net