ಗೀತಾ ಅಭಿಯಾನದ ಶಿವಸ್ವಾಮಿ

geeta
Published on

ಜಗತ್ತಿನಲ್ಲಿ ಆಧುನಿಕತೆ ಹೆಚ್ಚಿದಂತೆ ಬದುಕಿನ ತಲ್ಲಣಗಳು, ಯಾಂತ್ರಿಕತೆ ತೀವ್ರವಾಗುತ್ತಿವೆ. ಇಚ್ಛಿಸಿದಂತೆ ಬದುಕಬೇಕೆಂಬ ಮನಸ್ಥಿತಿ ಹಾಗೂ ಎಲ್ಲವನ್ನು ಪಡೆಯಬೇಕೆಂಬ ಅಸಹಜ ವ್ಯಾಮೋಹ ಮುಂತಾದವು ಬದುಕನ್ನು ಅಸ್ಥಿರವಾಗಿ ಸುವುದಲ್ಲದೇ ಭಯ, ಅಶಾಂತಿಯನ್ನು ಮೂಡಿಸುತ್ತ್ತಿವೆ. ಇಂತಹ ಮನೋವಿಕಾರವನ್ನು ಮೆಟ್ಟಿ ನಿಂತು ಸೌಶೀಲ್ಯವಾದ ಬದುಕನ್ನು ಉದಾತ್ತಗೊಳಿಸುವುದಕ್ಕೆ ಭಗವದ್ಗೀತೆ ಪೂರಕ. ಮನೋವಿಕಸನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಭಗವದ್ಗೀತೆಯನ್ನು ಸಾಮಾನ್ಯರ ಜೀವನದ ಭಾಗವಾಗಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅದರಲ್ಲಿ ಇದೂ ಒಂದು.

ರವಿ ಮಡೋಡಿ

ಶಿವಮೊಗ್ಗದಲ್ಲೊಬ್ಬ ನಿವೃತ್ತ ಅಧ್ಯಾಪಕರು ಸದ್ದಿಲ್ಲದೇ ಹಲವು ವರುಷಗಳಿಂದ ಭಗವದ್ಗೀತೆ ಅಭಿಯಾನ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಲಾಂತರ ಮಂದಿಗೆ ಅದರ ಸಾರವನ್ನು ಉಣಬಡಿಸುತ್ತಿದ್ದಾರೆ. ಅವರೇ ಶಿವಮೊಗ್ಗದ ಶಿವಸ್ವಾಮಿ ಕೆ.ವಿ.; ವಿದ್ಯಾಥಿರ್ದೆಸೆಯಲ್ಲಿರುವಾಗ ಶಾಲೆಯಲ್ಲಿ ಭಗವದ್ಗೀತೆಯನ್ನು ಅಭ್ಯಸಿಸಿದ್ದರು. ಮುಂದೆ ಇದರ ಬಗ್ಗೆ ಆಸಕ್ತಿ ಬೆಳೆದು ತಮ್ಮ ವೃತ್ತಿ ಜೀವನದಲ್ಲಿ ತಪ್ಪದೇ ಭಗವದ್ಗೀತೆಯ ನಿತ್ಯ ಪಾರಾಯಣ ಮಾಡುತ್ತಿದ್ದರು. ವಿಶ್ರಾಂತ ಜೀವನದಲ್ಲಿ ಒಮ್ಮೆತಮಿಳುನಾಡಿನ ಹೊಸೂರಿನ ಅನುಸೊನಿ ಆಶ್ರಮದಲ್ಲಿ ಭಗವದ್ಗೀತೆ ಉಪನ್ಯಾಸ ನೀಡಿದ್ದರು. ಅದನ್ನು ಕೇಳಿದ ಅಲ್ಲಿನ ವಿರಾಜೇಶ್ವರ ಸ್ವಾಮೀಜಿ, ಭಗವದ್ಗೀತೆ ಅಭಿಯಾನದ ತರಗತಿ ಆರಂಭಿಸುವಂತೆ ಸಲಹೆ ನೀಡಿದರು. ಈ ಕಾಲಟ್ಟದಲ್ಲಿ ಇಂತಹ ವಿಚಾರಗಳನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಅನುಮಾನ ಶಿವಸ್ವಾಮಿ ಅವರಿಗಿತ್ತು. ಆದರೂ ಮರುಮಾತನಾಡದೇ ಶಿವಮೊಗ್ಗದ ತಮ್ಮ ಮನೆಯಲ್ಲಿಯೇ ತರಗತಿಗಳನ್ನು ಪ್ರಾರಂಭಿಸಿದರು. ಆದರೆ ಅವರ ಊಹೆ ತಪ್ಪಾಗಿತ್ತು. ತರಗತಿಗಳು ಯಶಸ್ವಿಯಾಗಿ ಸಂಪನ್ನವಾದವು. ಒಂದರ ನಂತರ ಮತ್ತೊಂದರಂತೆ ಬೆಳೆಯುತ್ತ ಸಾಗಿದವು. ಭಾರತ ಮಾತ್ರವಲ್ಲದೇ ಅಮೆರಿಕದ ಕೆಲವು ನಗರಗಳಲ್ಲಿಯೂ ಅವರು ಕನ್ನಡ ಹಾಗೂ ಇಂಗ್ಲೀಷ್​ನಲ್ಲಿ ಭಗವದ್ಗೀತೆ ತರಗತಿಗಳನ್ನು ಮಾಡಿದ್ದಾರೆ. ಸಾಮಾನ್ಯವಾಗಿ ಅವರ ತರಗತಿ 3 ತಿಂಗಳು ನಡೆಯುತ್ತದೆ. ಭಗವದ್ಗೀತೆಯ ಶ್ಲೋಕ ಮತ್ತು ಅರ್ಥವನ್ನು ಮಾತ್ರ ಹೇಳದೆ, ನಿಜ ಬದುಕಿನ ಉದಾಹರಣೆಗಳನ್ನು ನೀಡುತ್ತ ಆಪ್ತವಾಗಿ ತರಗತಿ ನಡೆಸಿಕೊಡುವುದು ಅವರ ವೈಶಿಷ್ಟ. ಕೇಳುಗರಿಗೆ ಅದರ ತತ್ವಗಳು ಮನನೀಯವಾಗಿ ಬಿತ್ತರಗೊಳ್ಳುವಂತೆ ಮಾಡುತ್ತಾರೆ. ಸುಮ್ಮನೆ ನೋಡುವುದಕ್ಕೆಂದು ಬಂದು ಇಡೀ ತರಗತಿಯನ್ನು ಪೂರೈಸಿದವರು ಇದ್ದಾರೆ. ಜೀವನವೇ ಸಾಕು ಎಂದು ಆತ್ಮಹತ್ಯೆಗೆ ಮುಂದಾಗಿದ್ದವರು ಆಕಸ್ಮಿಕವಾಗಿ ಇವರ ಉಪನ್ಯಾಸ ಕೇಳಿ ಮತ್ತೆ ಬದುಕನ್ನು ಒಪ್ಪಿಕೊಂಡು ಜೀವನ ಸಾಗಿಸಿರುವ ಉದಾಹರಣೆಯಿದೆ. ಭಗವದ್ಗೀತೆ ಒಂದು ಧರ್ಮಕ್ಕೆ, ಒಂದು ಮತಕ್ಕೆ ಸೀಮಿತವಾದುದು ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ ಶಿವಸ್ವಾಮಿಯವರ ಪ್ರಕಾರ ಭಗವದ್ಗೀತೆಯ ತತ್ವಗಳು ಧರ್ಮ/ಜಾತಿಯನ್ನು ಮೀರಿದಂಥವು. ವ್ಯಕ್ತಿತ್ವ ವಿಕಾಸ ಬಯಸುವವರು ಭಗವದ್ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ. ಇಂದಿನ ಕಾಲಟ್ಟದಲ್ಲಿ ಕರೊನಾದಂಥ ತಲ್ಲಣಗಳು ಬದುಕನ್ನು ಅತಂತ್ರ ಸ್ಥಿತಿಗೆ ನೂಕಿವೆ. ಬದುಕೇ ಕಳೆಗುಂದಿರುವ ಈ ಸಮಯದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಆತ್ಮಸ್ಥೆರ್ಯವನ್ನು, ವಿಶ್ವಾಸವನ್ನು ಇದು ಮೂಡಿಸುತ್ತದೆ. ಯೂಟ್ಯೂಬ್​ನಲ್ಲಿ ಉಪನ್ಯಾಸಗಳನ್ನು ಬಿತ್ತರಿಸಿದ ಮೇಲೆ ಶಿವಸ್ವಾಮಿಯವರ ಭಗವದ್ಗೀತೆ ಅಭಿಯಾನ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿದೆ. 18 ಅಧ್ಯಾಯಗಳ 19.5 ಗಂಟೆಗಳ ಉಪನ್ಯಾಸವನ್ನು 7 ಲ ಮಂದಿ ವೀಸಿದ್ದಾರೆ. ಸುಮಾರು 7 ಸಾವಿರ ಮಂದಿ ಅವರ ಚಾನೆಲ್​ಗೆ ಸಬ್​ಸ್ಕ್ರೆಬ್​ ಆಗಿದ್ದಾರೆ. ತಂತ್ರಾನದ ಹೊಸ ಸಾಧ್ಯತೆಗಳಿಂದ ಇಂತಹ ಜೀವನ ಧರ್ಮದ ವಿಷಯಗಳು ಜನರಿಗೆ ಹತ್ತಿರವಾಗುತ್ತಿವೆ. ಲಾಕ್​ಡೌನ್​ ಅವಧಿಯಲ್ಲಿ ಸುಮಾರು 10 ತರಗತಿಗಳನ್ನು (3 ತಿಂಗಳ ಅವಧಿ) ಜೂಮ್​ ಎಂಬ ಆ್ಯಪ್​ನಲ್ಲಿ ನಡೆಸಿದ್ದಾರೆ. ಪ್ರತಿ ತರಗತಿಯಲ್ಲಿ ನೂರಾರು ಮಂದಿ ಇರುತ್ತಾರೆ. ಇಲ್ಲಿಯವರೆಗೆ 1000ಕ್ಕೂ ಅಧಿಕ ಮಂದಿ ಬೋಧನೆ ಪಡೆದಿದ್ದಾರೆ. ಭಾರತ ಮಾತ್ರವಲ್ಲದೇ ಹಲವು ದೇಶಗಳ ಭಗವದ್ಗೀತೆ ಆಸಕ್ತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಡಾಕ್ಟರ್​, ಇಂಜಿನಿಯರ್​, ವಿಾನಿಗಳು, ಇತರ ಉನ್ನತ ಹುದ್ದೆಯಲ್ಲಿರುವವರು ಭಾಗವಹಿಸುತ್ತಿರುವುದು ವಿಶೇಷ.

ಭಗವದ್ಗೀತಾ ಪಠಣ ಅಭಿಯಾನ

ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಭಗವದ್ಗೀತೆ ಅಭಿಯಾನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶಿವಸ್ವಾಮಿ ಭಾಗವಹಿಸಿದ್ದಾರೆ. ಬೇರೆ ಬೇರೆ ಶಿಣ ಸಂಸ್ಥೆಗಳಲ್ಲಿ ನೂರಾರು ಉಪನ್ಯಾಸಗಳನ್ನು ನೀಡಿದ್ದಾರೆ. ಮುಂದಿನ ಯೋಜನೆಯಾಗಿ, 2021ರ ಗಾಂಧೀ ಜಯಂತಿಯಿಂದ ಗೀತಾ ಜಯಂತಿ(ಡಿ.14)ವರೆಗೆ 70 ದಿನವೂ ಪ್ರತಿದಿನ 10 ಶ್ಲೋಕಗಳಂತೆ ದೇಶಾದ್ಯಂತ ಭಗವದ್ಗೀತೆ ಪಠನ ಅಭಿಯಾನ ಮಾಡಲು ಶಿವಸ್ವಾಮಿ ಉದ್ದೇಶಿಸಿದ್ದಾರೆ. ಡಿ. 11, 12, 13ರಂದು ಸೆಮಿನಾರ್​, ಕ್ವಿಜ್​, ಚರ್ಚಾಕೂಟ ಮುಂತಾದವು ನಡೆಯಲಿವೆ.

(ಲೇಖಕರು ಮಾಹಿತಿ ತಂತ್ರಜ್ಞಾನ ಉದ್ಯೋಗಿ, ಯಕ್ಷಗಾನ ಕಲಾವಿದ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net