ಗಿರಿಜನರಿಗೆ ಉಚಿತ ಹಾಲು ವಿತರಣೆಗೆ ಒಪ್ಪಿಗೆ ಸೂಚಿಸಿದ ಸಿಎಂ

Published on

ಚಾಮರಾಜನಗರ: ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುರುತಿಸಿದ್ದ ಬಡವರು, ಕೂಲಿ ಮತ್ತು ವಲಸೆ ಕಾರ್ಮಿಕರಿಗೆ ಉಚಿತವಾಗಿ ವಿತರಿಸುತ್ತಿದ್ದ ಹಾಲನ್ನು ಗುರುವಾರದಿಂದ ಗಿರಿಜನರಿಗೂ ನೀಡಲು ಸಿಎಂ ಯಡಿಯೂರಪ್ಪ ಸಮ್ಮತಿಸಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಬುಧವಾರ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರೊನಾ ತಡೆ ಪರಿಶೀಲನಾ ಸಭೆಯಲ್ಲಿ ಸಚಿವ ಶ್ರೀರಾಮುಲು ಸಿಎಂ ಯಡಿಯೂರಪ್ಪ ಅವರಿಗೆ ಪೋನ್ ಮಾಡಿ ಗಿರಿಜನರಿಗೂ ಉಚಿತವಾಗಿ ಹಾಲು ವಿತರಿಸಬೇಕೆನ್ನುವ ವಿಷಯ ಪ್ರಸ್ತಾಪಿಸಿ ಒಪ್ಪಿಗೆ ಪಡೆದರು.

ಚಾಮುಲ್ ನಿಂದ ಪ್ರತಿದಿನ 10 ಸಾವಿರ ಲೀಟರ್ ಹಾಲನ್ನು ಬಡವರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಕೊಡಗು, ಉತ್ತರ ಕನ್ನಡ, ಮೈಸೂರು, ಚಾಮರಾಜನಗರದಲ್ಲಿರುವ ಗಿರಿಜನರಿಗೂ ಇದನ್ನು ವಿಸ್ತರಿಸಬೇಕೆಂದು ನಿರ್ಧರಿಸಿ ಶಾಸಕ ಎನ್.ಮಹೇಶ್ ಅವರ ಸಲಹೆ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನು ಮುಂದೆ ಗಿರಿಜನರಿಗೂ ಉಚಿತ ಹಾಲನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net