ಗಾಯನ ಕಲೆಗೆ ಕರೋಕೆ ಪ್ರೇರಣೆ

6
Published on

ಗಾಯನ ಮಾಡಲು ಕರೋಕೆ ಅತಿ ಸರಳ ಮಾಧ್ಯಮವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ.ನಟರಾಜ್ ಜೋಯಿಸ್ ಹೇಳಿದರು.

ನಗರದ ಪುರಭವನದಲ್ಲಿ ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸ್ವರ ಸಂಭ್ರಮ ಕರೋಕೆ ಗಾಯನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಅಂತರಂಗದಲ್ಲಿ ಸಂಗೀತಪ್ರಿಯರಾಗಿರುತ್ತಾರೆ. ಆದರೆ, ಎಲ್ಲರಿಗೂ ಹಾಡುವ ಅವಕಾಶಗಳು ಸಿಗುವುದು ಸಲ್ಪ ಕಷ್ಟ. ಅನೇಕರಿಗೆ ಸಮಯವೂ ಸಿಗುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋಕೆ ಸರಳ ಮಾಧ್ಯಮವಾಗಿದೆ. ವೃತ್ತಿಪರರು, ಹವ್ಯಾಸಿ ಗಾಯಕರು ತಮ್ಮ ತಮ್ಮ ವೃತ್ತಿಯೊಂದಿಗೆ ಹಾಡುವ ಕಲೆಯನ್ನು ರೂಢಿಸಿಕೊಳ್ಳಲು ಕರೋಕೆ ನೆರವಾಗಿರುವುದು ಸಂತೋಷಕರ ಎಂದರು. ಡಾ.ರೇಖಾ ಮಾತನಾಡಿದರು. ಭರತ ನಾಯಕ್, ಸಮಂತ, ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net