ಗಾಂಧಿ ಅಹಿಂಸಾ ತತ್ವದಿಂದ ಗೆಲುವು

3 SRINGERI 5 rotary
ಶೃಂಗೇರಿ ರೋಟರಿ ಕ್ಲಬ್‌ನಿಂದ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಎ.ಸುಬ್ರಹ್ಮಣ್ಯ, ಪ್ರಿಯದರ್ಶಿನಿ ಹೆಗ್ಡೆ, ಮಂಜುಳಾ ಸುಬ್ರಹ್ಮಣ್ಯ, ಟಿ.ಐಶ್ವರ್ಯ ಇತರರಿದ್ದರು.
Published on

ಶೃಂಗೇರಿ: ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ಶಾರದಾ ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಚರಿಸಲಾಯಿತು.

ಕಾಂಗ್ರೆಸ್ ಮುಖಂಡ ಎ.ಆರ್.ವಿಜಯಕುಮಾರ್ ಮಾತನಾಡಿ, ಸ್ವಾತಂತ್ರೃಕ್ಕಾಗಿ ಮಹಾತ್ಮ ಗಾಂಧಿ ಅವರ ಕೊಡುಗೆ ಅಪಾರ. ದೇಶದ ಜನತೆಯನ್ನು ಸ್ವಾತಂತ್ರೃಚಳವಳಿಗೆ ಪ್ರೇರೇಪಿಸಿ, ಅಹಿಂಸಾತ್ಮಕವಾಗಿ ಬ್ರಿಟಿಷರಿಂದ ಸ್ವಾತಂತ್ರೃಪಡೆಯುವಲ್ಲಿ ಯಶಸ್ವಿಯಾದರು. ಮಹಾತ್ಮರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಕರ್ತವ್ಯ ಎಂದರು.

ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ರಮೇಶ್ ಭಟ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್, ಮಹಿಳಾ ಘಟಕದ ಅಧ್ಯಕ್ಷೆ ಶಕೀಲಾ ಗುಂಡಪ್ಪ, ಪ್ರಮುಖರಾದ ನಾಗರಾಜ್, ತ್ರಿವೇಣಿ, ಅನಿಲ್ ಹೊಸಕೊಪ್ಪ ಇತರರಿದ್ದರು.

ರೋಟರಿ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್, ರೋಟ್ರಾಕ್ಟ್, ಇಂಟ್ರಾಕ್ಟ್‌ನಿಂದ ಗಾಂಧೀಜಿ ಮತ್ತು ಶಾಸಿ ಜಯಂತಿ ಆಚರಿಸಲಾಯಿತು. ಜನಾರ್ದನ್ ಮಂಡಗಾರ್ ಉಪನ್ಯಾಸ ನೀಡಿದರು. 15 ಪೌರ ಕಾರ್ಮಿಕರನ್ನು ಗೌರವಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಎ.ಸುಬ್ರಹ್ಮಣ್ಯ, ಪ್ರಿಯದರ್ಶಿನಿ ಹೆಗ್ಡೆ, ಮಂಜುಳಾ ಸುಬ್ರಹ್ಮಣ್ಯ, ಟಿ.ಐಶ್ವರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net