ಗಾಂಜಾ ಸೊಪ್ಪು ವಶ, ಮೂವರ ಸೆರೆ

IMG-20230901-WA0027.jpg
Published on

ದಾವಣಗೆರೆ: ಆಂಜನೇಯ ಬಡಾವಣೆ 12ನೇ ಕ್ರಾಸ್‌ನ ಮನೆಯೊಂದರಲ್ಲಿ ಮಾರಾಟಕ್ಕೆಂದು ಅಕ್ರಮವಾಗಿ ಗಾಂಜಾ ಸೊಪ್ಪು ಸಂಗ್ರಹಿಸಿದ್ದ ಮೂವರು ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ದಾವಣಗೆರೆಯ ವಿಶ್ವನಾಥ ಪೂಜಾರ್, ಎಸ್.ಶಿವಾಸ್, ಮನೋಜ್ ಬಂಧಿತರು. 1.50 ಲಕ್ಷ ರೂ. ಮೌಲ್ಯದ 5 ಕೆ.ಜಿ.800 ಗ್ರಾಂ. ಗಾಂಜಾ ಸೊಪ್ಪು, 600 ರೂ. ಹಾಗೂ ಗಾಂಜಾ ಸೇವನೆಗೆ ಬಳಸಿದ್ದ 2 ಚಿಲುಮೆಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಪಿ ಆರ್.ಬಿ. ಬಸರಗಿ, ದಾವಣಗೆರೆ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಠಾಣೆಯ ಪಿಐ ಪ್ರಭಾವತಿ ಸಿ. ಶೇತಸನದಿ, ಪಿಎಸ್‌ಐಗಳಾದ ಜಿ.ಎಂ. ರೇಣುಕಾ, ವಿಜಯ್ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net