ಗಾಂಜಾ ಬೆಳೆದಿದ್ದವನ ಬಂಧನ

11.pyp.03
Published on

ಪಿರಿಯಾಪಟ್ಟಣ: ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, 14 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಚಿಕ್ಕವಡ್ಡರಕೇರಿ ನಿವಾಸಿ ಹರೀಶ್ ಬಂಧಿತ ಆರೋಪಿ. ತನ್ನ ಜಮೀನಿನಲ್ಲಿ 12 ಗಾಂಜಾ ಗಿಡಗಳನ್ನು ಬೆಳೆದಿದ್ದನೆನ್ನಲಾಗಿದೆ. ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಪಿಐ ಪ್ರದೀಪ್ ಮತ್ತು ಪಿಎಸ್‌ಐ ಎಚ್.ಜೆ.ಗಣೇಶ್, ಎಎಸ್‌ಐಗಳಾದ ಚಿಕ್ಕನಾಯಕ, ಗೋಪಾಲ್, ಜಯರಾಮೇಗೌಡ, ಕ್ರೂಸ್, ಕಬೀರುದ್ದೀನ್, ರಾಜರತ್ನಂ, ಅಭಿಜಿತ್ ಪಾಲ್ಗೊಂಡಿದ್ದರು ಎಂದು ಡಿವೈಎಸ್‌ಪಿ ಸುಂದರ್‌ರಾಜ್ ವಿಜಯವಾಣಿಗೆೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net