ಗರ್ಭಿಣಿ ಪತ್ನಿ ಹತ್ಯೆಗೈದ ಪತಿ

Crime Logo
Published on

ನಂಜನಗೂಡು: ನಗರದ ಚಾಮಲಾಪುರಹುಂಡಿ ಬಡಾವಣೆಯಲ್ಲಿ ಗುರುವಾರ ಪತಿಯೇ ತನ್ನ ಗರ್ಭಿಣಿ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಬಡಾವಣೆಯ ನಿವಾಸಿ ಶೋಭಾ (21) ಮೃತರು. ಕಟ್ಟಡ ಕಾರ್ಮಿಕನಾದ ಮಂಜುನಾಥ್ ಹಾಗೂ ಶೋಭಾ ದಂಪತಿಗೆ 2 ವರ್ಷದ ಗಂಡು ಮಗುವಿದೆ. ಆದರೆ ಮತ್ತೆ ಗರ್ಭಿಣಿ(7 ತಿಂಗಳು)ಯಾಗಿದ್ದ ಪತ್ನಿ ಹಾಗೂ ಪತಿ ನಡುವೆ ಮನಸ್ತಾಪ ಉಂಟಾಗಿದ್ದ ಕಾರಣ ಶೋಭಾ ತವರು ಮನೆಗೆ ಬಂದಿದ್ದಳು. ಹೀಗಾಗಿ ಹೆಂಡತಿಯನ್ನು ಕಳುಹಿಸುವಂತೆ ಮಂಜುನಾಥ್ ಒತ್ತಾಯಿಸಿದ್ದು, ಪಾಲಕರು ಕಳುಹಿಸಲು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಆರೋಪಿ ಮಂಜುನಾಥ್ ಪತ್ನಿ ಶೋಭಾಳ ಕುತ್ತಿಗೆಗೆ ಚಾಕುವಿನಿಂದ ಇರಿದನು. ಕೂಡಲೇ ಶೋಭಾಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮಂಜುನಾಥ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net