ಗರಿಗಳ ಹಬ್ಬ ಆಚರಣೆ

13bhr 2 church
ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್‌ನಲ್ಲಿ ಗುಡ್‌ರ್ೈಡೆ ಪೂರ್ವಭಾವಿಯಾಗಿ ಗರಿಗಳ ಹಬ್ಬವನ್ನು ಆಚರಿಸಲಾಯಿತು. ಪೌಲ್ ಡಿಸೋಜಾ, ಕೀರ್ತಿಕಿರಣ್ ಇತರರಿದ್ದರು.
Published on

ಬಾಳೆಹೊನ್ನೂರು: ಪಟ್ಟಣದ ವಿಜಯಮಾತೆ ಚರ್ಚ್‌ನಲ್ಲಿ ನಡೆಯಲಿರುವ ಗುಡ್‌ಫ್ರೈಡೆ ಪೂರ್ವಭಾವಿಯಾಗಿ ಭಾನುವಾರ ಗರಿಗಳ ಹಬ್ಬ ಆಚರಿಸಲಾಯಿತು.

ಕ್ರೈಸ್ತ ಬಾಂಧವರು ಧರ್ಮಗುರುಗಳು ಆಶೀರ್ವದಿಸಿ ನೀಡಿದ ಗರಿಗಳನ್ನು ಹಿಡಿದು ಏಸುಕ್ರಿಸ್ತರ ಜಯಘೋಷಗಳೊಂದಿಗೆ ಮೆರವಣಿಗೆ ನಡೆಸಿ, ಏಸುಕ್ರಿಸ್ತರ ಸ್ತುತಿಗಳನ್ನು ಪಠಿಸಿದರು.

ವಿಜಯಮಾತೆ ಚರ್ಚ್‌ನ ಧರ್ಮಗುರು ಪೌಲ್ ಡಿಸೋಜಾ ಆರ್ಶೀವಚನ ನೀಡಿ, ಕ್ರೈಸ್ತರು ಪವಿತ್ರ ಶುಕ್ರವಾರವನ್ನು ವಿಶೇಷವಾಗಿ ಏಸುಕ್ರಿಸ್ತರ ಸ್ಮರಣೆಯೊಂದಿಗೆ ಆಚರಿಸಬೇಕು. ಅವರು ನೀಡಿದ ಸಂದೇಶದಂತೆ ಪವಿತ್ರ ವಾರದ ಸಂದರ್ಭದಲ್ಲಿ ಜಾತಿ, ಮತ ಬೇಧವಿಲ್ಲದೆ ಬಡವರು, ದೀನ ದಲಿತರಿಗೆ ಸಹಾಯ ಮಾಡಬೇಕು ಎಂದರು. ಗರಿಗಳ ಹಬ್ಬದ ಧಾರ್ಮಿಕ ವಿಧಾನಗಳಲ್ಲಿ ವಿಜಯಮಾತೆ ಚರ್ಚ್‌ನ ಕಿರಿಯ ಧರ್ಮಗುರು ಕೀರ್ತಿಕಿರಣ್ ಸೇರಿದಂತೆ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net