ಗಮನ ಬೇರೆಡೆ ಸೆಳೆದು ಚಿನ್ನದ ಸರ ಕಳವು

Crime_20250404130552225.jpg
Published on

ಕೇರಳದಿಂದ ಮೈಸೂರಿಗೆ ಆಗಮಿಸಿದ್ದ ಟೆಂಪೋ ಚಾಲಕನ ಗಮನವನ್ನು ಬೇರೆಡೆ ಸೆಳೆದ ದುಷ್ಕರ್ಮಿ ಆತನ ಕುತ್ತಿಗೆಯಲ್ಲಿದ್ದ 14 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ.

ಕೇರಳದ ಕಣ್ಣೂರು ನಿವಾಸಿ ಕೆ.ಶಬೀನ್ ಚಿನ್ನದ ಸರ ಕಳೆದುಕೊಂಡವರು.

ಶಬೀನ್ ಸ್ನೇಹಿತರ ಜತೆ ಟಿಟಿ ವಾಹನದಲ್ಲಿ ಮೈಸೂರಿಗೆ ಬಂದಿದ್ದರು. ಏ.5ರ ರಾತ್ರಿ ಊಟ ಮಾಡುವ ಸಲುವಾಗಿ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಂದಿದ್ದಾರೆ. ಈ ವೇಳೆ ದುಷ್ಕರ್ಮಿ ಒಬ್ಬ ಅವರ ಗಮನ ಬೇರೆಡೆ ಸೆಳೆದು ಅವರ ಕುತ್ತಿಗೆಯಲ್ಲಿ ಇದ್ದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಚಾಲಕ ನೀಡಿದ ದೂರಿನ ಮೇರೆಗೆ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net