ಗಂಧದಗುಡಿ ಫೌಂಡೇಷನ್ ಪದಾಧಿಕಾರಿಗಳ ಪ್ರತಿಭಟನೆ

8
Published on

ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಷನ್ ವತಿಯಿಂದ ಶುಕ್ರವಾರ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.

ಮೈಸೂರಿನಲ್ಲಿ ದಿನೇ ದಿನೆ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಕೆಲ ದಿನಗಳ ಹಿಂದೆ ವ್ಯಕ್ತಿಯ ಕೊಲೆಯಾಗಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಬಾಲಕಿಯ ಕೊಲೆಯಾಗಿದೆ. ದಸರಾ ಸಂದರ್ಭದಲ್ಲಿ ಬಲೂನ್ ಮಾರಲು ಕಲಬುರಗಿಯಿಂದ ಕುಟುಂಬದೊಂದಿಗೆ ಬಂದಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು, ಈ ಘಟನೆ ಮೈಸೂರು ಮಾತ್ರವಲ್ಲದೆ ಇಡೀ ಮಾನವ ಕುಲವೇ ತಲೆತಗ್ಗಿಸುವಂತಾಗಿದೆ. ವ್ಯಾಪಾರ ಮುಗಿಸಿ ಪಾಲಕರೊಂದಿಗೆ ಮಲಗಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

ಗಂಧದಗುಡಿ ಫೌಂಡೇಷನ್ ಅಧ್ಯಕ್ಷ ಆರ್ಯನ್ ಗಂಧದಗುಡಿ, ಉಪಾಧ್ಯಕ್ಷ ಮನೋಹರ್ ಗೌಡ, ಪದಾಧಿಕಾರಿಗಳಾದ ಮೇಘನ್‌ಗೌಡ, ಮಹದೇವ್ ಶೆಟ್ರು, ಯಶೋದಾ.ಆರ್, ಕಿರಣ್ ಶೆಟ್ಟಿ, ವಿನೋದ್ ವಿಲಿಯಂ, ವಜ್ರಮುನಿ, ಪೃಥ್ವಿರಾಜ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net