ಖಾಸಗಿ ಶಾಲೆಯ ಮಕ್ಕಳಿಗೆ ಸಂಕ್ರಾAತಿ ಹಬ್ಬದ ಸೊಗಡು ಪರಿಚಯ / ವಿವಿಧ ಗ್ರಾಮೀಣ ಸ್ಪರ್ಧೆಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದಲ್ಲಿರುವ ಖಾಸಗಿ ಶಾಲೆಯ ವಾರ್ಷಿಕೋತ್ಸವ ಪ್ರಯುಕ್ತ ಮಕರ ಸಂಕ್ರಾAತಿ ಹಬ್ಬವನ್ನು ಗ್ರಾಮೀಣ ಪ್ರದೇಶದಲ್ಲಿನ ಜನರು ಹೇಗೆ ಆಚರಣೆ ಮಾಡತ್ತಾರೆ ಎಂಬುದನ್ನು ಮಕ್ಕಳಿಗೆ ಸಾಂಪ್ರಾದಾಯಿಕ ಉಡುಗೆಗಳನ್ನು ಧರಿಸಿ ಸಂಕ್ರಾAತಿ ಹಬ್ಬದ ಪರಿಕಲ್ಪನೆಯನ್ನು ಪರಿಚಯಿಸಿದರು.

ತಾಲೂಕಿನ ಬಸವನೆತ್ತ ಗ್ರಾಮದ ತೋಟದಲ್ಲಿ ಸಂಕ್ರಾAತಿಯ ದಿನದಂದು ಹಳ್ಳಿಯ ಜನರು ಹಸುಗಳಿಗೆ, ಬಂಡಿಗೆ ಹಾಗೂ ದವಸಧಾನ್ಯಗಳಿಗೆ ಪೂಜೆ ಸಲ್ಲಿಸುವುದು, ವಿಶೇಷವಾಗಿ ಸಿಂಗರಿಸಿದ್ದ ಬಂಡಿಯಲ್ಲಿ ಮಕ್ಕಳು ಕುಳಿತು ಗ್ರಾಮೀಣ ಸೊಗಡನ್ನು ನೆನಪಿಸುವುದು, ಮಕ್ಕಳಿಗೆ ಏರ್ಪಡಿಸಿದ್ದ ಗಾಳಿಪಟ, ನೃತ್ಯ, ಸೇರಿದಂತೆ ವಿವಿಧ ಸ್ಪರ್ಧೆಗಳು ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಉಪ ತಹಶಿಲ್ದಾರ್ ಹಂಸಾ ಮರಿಯಾ ಮಾತನಾಡಿ, ನಗರ ಪ್ರದೇಶದ ಮಕ್ಕಳಿಗೆ ಗ್ರಾಮೀಣ ಪ್ರದೇಶಗಳಲ್ಲಿನ ಹಬ್ಬಗಳನ್ನು ಆಚರಿಸುವ ಸೊಬಗನ್ನು ತೋರಿಸಲಾಗಿದೆ. ಮಕ್ಕಳಿಗೆ ಹಳೆಯ ತಲೆಮಾರಿನ ಸಂಪ್ರದಾಯವನ್ನು ತಿಳಿಸುವ ಸಣ್ಣ ಪ್ರಯತ್ನವನ್ನು ಅಕ್ಷರಾ ಪ್ಲೇ ಹೋಂ ಶಾಲೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ಅಕ್ಷರಾ ಪ್ಲೇ ಹೋಂ ಶಾಲೆಯ ಅಧ್ಯಕ್ಷ ಪವನ್ ಕುಮಾರ್, ಪ್ರಾಂಶುಪಾಲರಾದ ಶ್ರೀಲತಾ, ಬಿಇಒ ಕಛೇರಿಯ ಗಿರೀಶ್, ಆಚಾರ್ಯ ರಾಘವೇಂದ್ರ ಭಟ್, ರಾಜಣ್ಣ, ಚಂದ್ರಕಾAತ್, ಶಿವು ಶಾಲೆಯ ಶಿಕ್ಷಕರಾದ ಪಲ್ಲವಿ, ಸೇರಿದಂತೆ ಮಕ್ಕಳ ಪೋಷಕರು ಇದ್ದರು.

ಚಿತ್ರ ೧೧ ಕೆ.ಎಲ್.ಆರ್. ೦೨ : ಗ್ರಾಮೀಣ ಭಾಗದಲ್ಲಿ ಆಚರಿಸುವ ಸಂಕ್ರಾAತಿ ಹಬ್ಬದ ಪರಿಕಲ್ಪನೆಯನ್ನು ಶಾಲೆಯ ಮಕ್ಕಳಿಗೆ ತೋರಿಸುವ ಕೆಲಸ ಅಕ್ಷರಾ ಪ್ಲೇ ಹೋಂ ಶಾಲೆಯವರು ಮಾಡಿದ್ದು, ಉಪತಹಶೀಲ್ದಾರ್ ಹಂಸ ಮರಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net