

ಚಾಮುಂಡಿಬೆಟ್ಟದಲ್ಲಿ ಗಂಧದಗುಡಿ ೌಂಡೇಷನ್ ವತಿಯಿಂದ ಭಾನುವಾರ ಕ್ವೀನ್ ಚಾಮುಂಡಿ ಹಿಲ್ ಡ್ರೈವ್ 2025 ಕಾರ್ಯಕ್ರಮ ನೆರವೇರಿತು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜತೆಗೆ ಸ್ವಚ್ಛತೆಯನ್ನು ಮಾಡುವ ಮೂಲಕ ಸಾಥ್ ನೀಡಿದರು.
ಇದೇ ವೇಳೆ ಮಾತನಾಡಿ ಅವರು, ಸ್ವಚ್ಛತೆಯಲ್ಲಿ ಮೈಸೂರು ಪ್ರಥಮ ಸ್ಥಾನ ಪಡೆಯಲು ಎಲ್ಲರೂ ಕೈಜೋಡಿಸಬೇಕಿದೆ. 2015 ಮತ್ತು 2016ರಲ್ಲಿ ಎರಡು ವರ್ಷ ದೇಶದಲ್ಲಿಯೇ ಸ್ವಚ್ಛತೆಯಲ್ಲಿ ಮೈಸೂರು ಪ್ರಥಮ ಸ್ಥಾನ ಪಡೆದಿತ್ತು .ಆದರೆ ಈಗ 25-26ನೇ ಸ್ಥಾನಕ್ಕೆ ಇಳಿದಿದೆ. ಇಷ್ಟೊಂದು ಕೆಳಕ್ಕೆ ಇಳಿಯಲು ಏನು ಕಾರಣ, ಮತ್ತೆ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಏನು ಮಾಡಬೇಕು? ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎನ್ನುವ ಮನಸ್ಥಿತಿಯಲ್ಲಿ ಪ್ರತಿಯೊಬ್ಬರಲ್ಲೂ ಬರಬೇಕಿದೆ. ಬೇರೆ ನಗರಗಳು ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಬರಲು ಏನು ಕಾರಣ ಎಂಬುದನ್ನು ತಿಳಿಯಬೇಕು ಎಂದು ಸಲಹೆ ನೀಡಿದರು.
ರಸ್ತೆ ಬದಿ, ಮೈದಾನ, ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಕಸವನ್ನು ಹಾಕಬಾರದು. ನಗರದ ಪಾಲಿಕೆಯಲ್ಲಿರುವ ಸೂಚನೆಯನ್ನಂತೆ ನಾವು ಕಸ ಹಾಕಬೇಕು. ವಾಹನಗಳಲ್ಲಿ ಹೋಗುವಾಗ ಅಥವಾ ಬರುವಾಗ ತಿಂಡಿ ತಿನಿಸುಗಳನ್ನು ತಿಂದು ಪ್ಲಾಸ್ಟಿಕ್‌ಗಳನ್ನು ರಸ್ತೆ ಮಧ್ಯೆದಲ್ಲಿಯೇ ಎಸೆಯಬಾರದು. ಮನೆಗೆ ತೆಗೆದುಕೊಂಡು ಬಂದು ಮನೆಯ ಕಸದೊಂದಿಗೆ ಸೇರಿಸಿ, ಬೇರೆ ಕಡೆ ಇರುವ ಕಸದೊಂದಿಗೆ ಸೇರಿಸಿ ಸ್ವಚ್ಛತಾ ಸಿಬ್ಬಂದಿ ಕೊಡಬೇಕು ಎಂದರು.
ಕೆಲವು ತ್ಯಾಜ್ಯದ ಸ್ಥಳವನ್ನು ಸ್ಥಳಾಂತರ ಮಾಡಲು ಹಾಗೂ ಎಕ್ಸಲ್‌ಪ್ಲಾಂಟ್ ತ್ಯಾಜ್ಯ ತೆಗೆಸಲು ಟೆಂಟರ್ ಕೆಲಸ ಕೂಡ ನಡೆಯುತ್ತಿದೆ. ತ್ಯಾಜ್ಯ ಕಡಿಮೆ ಮಾಡಿ, ಸ್ವಚ್ಛತೆ ಕಾಪಾಡಿದರೆ, ಮೈಸೂರು ಸ್ವಚ್ಛತೆಯಲ್ಲಿ ಉನ್ನತ ಮಟ್ಟಕ್ಕೆ ಹೋಗಬಹುದು. ಚಾಮುಂಡಿಬೆಟ್ಟ ಸ್ವಚ್ಛ ಮಾಡಿದಂತೆ ಮೈಸೂರನ್ನು ಚಾಮುಂಡಿಬೆಟ್ಟದ ಆವರಣದಂತೆ ಎಂದು ತಿಳಿದು ಸ್ವಚ್ಛತೆ ಮಾಡಬೇಕು ಎಂದು ಹೇಳಿದರು.
ಚಾಮುಂಡಿಬೆಟ್ಟದಲ್ಲಿ ಗಂಧದಗುಡಿ ೌಂಡೇಷನ್‌ನ ಹಾಗೂ ನಾನಾ ಸಂಘಟನೆಗಳ ಸದಸ್ಯರೊಂದಿಗೆ ಯದುವೀರ್, ಚಾಮುಂಡಿಬೆಟ್ಟದ ಆವರಣದಲ್ಲಿ ಕಸ ಹೆಕ್ಕುವ ಮೂಲಕ ಸ್ವಚ್ಛತೆಯಲ್ಲಿ ಕೈಜೋಡಿಸುವಂತೆ ಸಲಹೆ ನೀಡಿದರು.
ಗಂಧದಗುಡಿ ೌಂಡೇಷನ್‌ನ ಗೌರವಾಧ್ಯಕ್ಷ ನಾಗೇಂದ್ರ ಪ್ರಸಾದ್, ಅಧ್ಯಕ್ಷ ಆರ್ಯನ್ ಗಂಧದಗುಡಿ, ಉಪಾಧ್ಯಕ್ಷ ಮನೋಹರ ಗೌಡ, ಬೆಂಗಳೂರು ನಗರ ಅಧ್ಯಕ್ಷ ಸಿದ್ದೇಶ್ವರ ಪ್ರಸಾದ್, ಯಂಗ್ ಆರ್ಮಿ ೌಂಡೇಷನ್‌ನ ಅಧ್ಯಕ್ಷ ಪೃಥ್ವಿರಾಜ್, ನೆವರ್ ೇಡ್ ಅವೇ ಎಂಡಿ ಮಧುಶಂಕರ್, ದುಶ್ಯಂತ್, ಪ್ರದೀಪ್, ಅಭಿನಂದನ್ ಅರಸ್, ಮೇಘನರಾಜ್, ವೇಣುಗೋಪಾಲ್, ಮಹದೇವಶೆಟ್ಟಿ ಮತ್ತಿತರರು ಇದ್ದರು.