

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಬಹು ಜನಾಕರ್ಷಣೆಯ ದಸರಾ ಕಂಠೀರವ ವಿಭಾಗದಲ್ಲಿ ಕಿರಣ್ ಭದ್ರಾವತಿ, ದಾವಣಗೆರೆಯ ಬಿ.ಎಚ್.ಕಿರಣ್, ಬಿ.ಗಿರೀಶ್, ಬೆಳಗಾವಿಯ ಶಿವಯ್ಯ ಪೂಜಾರಿ, ಪರಶುರಾಮ್, ಕಾಮೇಶ್ ಪಾಟೀಲ್, ಬಾಗಲಕೋಟೆಯ ಬಾಪು ಸಾಹೇಬ್ ಸಿಂಧೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ದಸರಾ ಕೇಸರಿ ವಿಭಾಗದಲ್ಲಿ ಬೆಳಗಾವಿಯ ಸೂರಜ್ ಪಾಟೀಲ್, ಬಿ.ಪರಮಾನಂದ, ದಾವಣಗೆರೆಯ ಎಚ್.ಜಿ.ಸಚಿನ್, ಬಾಗಲಕೋಟೆಯ ಸಚಿನ್ ಯಲ್ಲಪ್ಪಾ ಶಿರಗುಂಪಿ, ಉತ್ತರ ಕನ್ನಡದ ಮಂಜುನಾಥ ಗೌಡ, ರಾಮಣ್ಣ, ದಾವಣಗೆರೆಯ ದಾನೇಶ್, ಪ್ರವೀಣ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ದಸರಾ ಕುಮಾರ ವಿಭಾಗದಲ್ಲಿ ಮಂಡ್ಯದ ಶ್ರೀಕಾಂತ್, ಎಚ್.ಸಿ.ಮನೋಜ್, ಗಿರೀಶ್, ವಿಕಾಶ್, ಮೈಸೂರಿನ ಮೋಹನ್ ಕಾರ್ತಿಕ್, ಚೇತನ್ ಗೌಡ, ಆರ್.ನಿತಿನ್, ಬಿ.ಚೇತನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ದಸರಾ ಕಿಶೋರ ವಿಭಾಗದಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಪಡೆದಿರುವ ದಾವಣಗೆರೆಯ ಕೊರವರ ಸಂಜೀವ ಮತ್ತೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಜತೆಗೆ ಬಾಗಲಕೋಟೆಯ ಮಲ್ಲಪ್ಪ, ದಾವಣಗೆರೆಯ ಅರ್ಜುನ್ ಕೂಡ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.