ಕ್ವಾರಂಟೈನ್​ನಲ್ಲಿ ವಿದೇಶಿ ಪ್ರವಾಸಿಗರು

8gkn3-a2-
Published on

ಗೋಕರ್ಣ: ಕಳೆದೆರಡು ದಿನಗಳಲ್ಲಿ 10 ವಿದೇಶಿ ಪ್ರವಾಸಿಗರು ತಮ್ಮ ದೇಶದಿಂದ ನೇರವಾಗಿ ಗೋಕರ್ಣಕ್ಕೆ ಆಗಮಿಸಿ ಇಲ್ಲಿ ಬೇರೆಡೆ ವಾಸವಾಗಿದ್ದಾರೆ. ಇವರನ್ನು ಪತ್ತೆ ಹಚ್ಚಿ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಪಾಸಣೆಗೊಳಪಡಿಸಿ ಅವರ ಗಂಟಲ ದ್ರವ ಸಂಗ್ರಹಿಸಲಾಯಿತು. ಈ ವಿದೇಶಿಯರ ಪೈಕಿ ಹೆಚ್ಚಿನವರು ರಷ್ಯಾದವರಾಗಿದ್ದು ಉಳಿದಂತೆ ಜರ್ಮನ್ ಮತ್ತು ಇಸ್ರೇಲ್ ದೇಶದ ಮೂವರು ಯಾತ್ರಿಕರಿದ್ದಾರೆ. ಇವರು ವಾಸವಾಗಿರುವ ಕಡೆಗಳಲ್ಲಿಯೆ ಏಳು ದಿನದ ಕ್ವಾರಂಟೈನ್​ಗೆ ಅವರನ್ನು ಒಳಪಡಿಸಿ ವಾಸ ಸ್ಥಳದಲ್ಲಿ ಅಗತ್ಯ ನೋಟಿಸ್ ಅಂಟಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net