‘ಕ್ಲೈಮ್ಬಥಾನ್ 3.0’ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ

3
Published on

ವಿಶ್ವ ಆರೋಗ್ಯ ದಿನ-2025 ಅಂಗವಾಗಿ ಸಮುದಾಯದ ಆರೋಗ್ಯ ಮತ್ತು ಸ್ವಾಸ್ಥೃವನ್ನು ಉತ್ತೇಜಿಸುವ ಸಂಬಂಧ ಅಪೋಲೊ ಬಿಜಿಎಸ್ ಆಸ್ಪತ್ರೆ ವತಿಯಿಂದ ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ ‘ಕ್ಲೈಮ್ಬಥಾನ್ 3.0’ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು.

ಕ್ಲೈಮ್ಬಥಾನ್‌ನಲ್ಲಿ ಭಾಗವಹಿಸಿದ್ದ ನೂರಾರು ಸಾರ್ವಜನಿಕರು ಚಾಮುಂಡಿಬೆಟ್ಟ ಹತ್ತುವ ಮೂಲಕ ಸಂಭ್ರಮಿಸಿದರು. ಕ್ಲೈಮ್ಬಥಾನ್ ಮೂಲಕ ಅಪೋಲೊ ಬಿಜಿಎಸ್ ಆಸ್ಪತ್ರೆ ಜನರಲ್ಲಿ ದೈಹಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಜತೆಗೆ ದೀರ್ಘಕಾಲಿಕ ಆರೋಗ್ಯದ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಯಿತು.

ನಗರದಾದ್ಯಂತ 600ಕ್ಕೂ ಹೆಚ್ಚು ಉತ್ಸಾಹಿ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಚಾಮುಂಡಿ ಬೆಟ್ಟದ 1,001 ಮೆಟ್ಟಿಲುಗಳನ್ನು ಹತ್ತಿದರು. ಉತ್ಸಾಹಭರಿತ ಹದಿಹರೆಯದವರಿಂದ ಹಿಡಿದು, ಹಿರಿಯ ನಾಗರಿಕರ ತನಕ ಎಲ್ಲ ವಯೋಮಾನದ ಜನರು ಭಾಗಿಯಾಗಿದ್ದರು.

ಅಪೋಲೊ ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ ಎನ್.ಜಿ.ಭರತೀಶ ರೆಡ್ಡಿ ಹಾಗೂ ಕ್ರೀಡಾಪಟು ಜಮ್ಮಡ ಪ್ರೀತ್ ಅಪ್ಪಯ್ಯ ಕ್ಲೈಮ್ಬಥಾನ್‌ನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಎನ್.ಜಿ.ಭರತೀಶ ರೆಡ್ಡಿ ಮಾತನಾಡಿ, ಇಂತಹ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ಅಪೋಲೊ ಬಿಜಿಎಸ್ ಆಸ್ಪತ್ರೆಯು ಸಮುದಾಯದ ಉತ್ತಮ ಆರೋಗ್ಯ ಕಾಪಾಡುವ ಕಡೆ ದಿಟ್ಟ ಹೆಜ್ಜೆ ಇಟ್ಟಿದ್ದು, ಇದು ಮೈಸೂರಿನವರನ್ನು ಹೆಚ್ಚು ಆರೋಗ್ಯ ಪೂರ್ಣ ಜೀವನಶೈಲಿಯ ಕಡೆಗೆ ಒಯ್ಯುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net