

ನಗರದ ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆಯ ವೈದ್ಯರು ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾಸನ ಮೂಲದ 73 ವರ್ಷದ ರೈತರೊಬ್ಬರಿಗೆ ಬಲ ಹೆಪಟೆಕ್ಟಮಿ ಮಾಡಿ ರೈತರ ಜೀವ ಉಳಿಸಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರೋಗಿ ಆಸ್ಪತ್ರೆಗೆ ಬಂದಾಗ ಪರೀಕ್ಷೆಗಳ ನಂತರ ಅವರಿಗೆ ಲಿವರ್ ಕ್ಯಾನ್ಸರ್ ಕಾಯಿಲೆ ದೃಢಪಟ್ಟಿತ್ತು. ಹೀಗಾಗಿ ಬಲ ಹೆಪಟೆಕ್ಟಮಿ ಅಂದರೆ ಯಕೃತ್ತಿನ ಸಂಪೂರ್ಣ ಬಲಭಾಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಲಾಯಿತು ಎಂದು ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥ ಡಾ.ಎಸ್.ನವೀನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶಸ್ತ್ರಚಿಕಿತ್ಸೆ ತಂಡದಲ್ಲಿ ಅರಿವಳಿಕೆ ವಿಭಾಗದ ಡಾ.ಜಿ.ಜ್ಯೋತಿ, ಡಾ.ಕೆ.ವಿ.ನಾಗಾನಂದ್, ಡಾ.ಕೇಶವಮೂರ್ತಿ ಮತ್ತಿತರರು ನೆರವಾದರು ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ಕೆ.ವಿ.ನಾಗಾನಂದ್, ಡಾ.ಕೇಶವಮೂರ್ತಿ ಹಾಗೂ ರೋಗಿ ಇತರರಿದ್ದರು.