

ಬೆಂಗಳೂರು
ಕಾನೂನು ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ(ಕ್ಲಾಟ್) ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಈ ಪರೀಕ್ಷೆ ಸೆ.28ರಂದು ನಡೆದಿತ್ತು. ಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಅನುತ್ತೀರ್ಣರಾಗಿರುವ ಹಾಗೂ ಕಡಿಮೆ ಅಂಕಪಡೆದಿರುವ ಬಹುತೇಕರು ತಮ್ಮ ಅಸಮಧಾನವನ್ನು ಸಾಮಾಜಿಕ ಜಾಲತಾಣದಲ್ಲಿ ಹೊರ ಹಾಕಿದ್ದಾರೆ.
ಆದರೆ, ವಿದ್ಯಾರ್ಥಿಗಳ ದೂರನ್ನು ಅಲ್ಲೆಗೆಳೆದಿರುವ ರಾಷ್ಟ್ರೀಯ ಕಾನೂನು ಶಾಲೆ ಯಾವುದೇ ವಿದ್ಯಾರ್ಥಿಗಳು ಅಸಮಧಾನಗೊಂಡಿಲ್ಲ. ನಮಗೆ ಯಾವುದೇ ದೂರು ಬಂದಿಲ್ಲವೆಂದು ಹೇಳಿದೆ.
ಮತ್ತೊಂದು ಕಡೆ ‘ಲಿತಾಂಶವನ್ನು ಸ್ವೀಕರಿಸಲು ನಾವು ಸಿದ್ಧರಾಗಿಲ್ಲ. ಪರೀಕ್ಷೆ ಸಹ ಸಂವಿಧಾನ ಬದ್ಧವಾಗಿ ನಡೆದಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸುತ್ತೇನೆಂದು’ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಪದವಿ ಕ್ಲಾಟ್‌ನಲ್ಲಿ 147 ಅಂಕಗಳಿಗೆ 127.25 ಅಂಕವೇ ಮೊದಲ ರ‌್ಯಾಂಕಿನ ಅಂಕವಾಗಿದೆ. ಸ್ನಾಕತೋತ್ತರ ಪದವಿ ಕ್ಲಾಟ್‌ನಲ್ಲಿ 119 ಅಂಕಗಳಿಗೆ 72 ಅಂಕಗಳೇ ಅತಿ ಹೆಚ್ಚಿನ ಅಂಕವಾಗಿದೆ.
ಯುಜಿನಲ್ಲಿ 3 ಅಂಕ ಮತ್ತು ಪಿಜಿನಲ್ಲಿ 1 ಅಂಕಗಳನ್ನು ಪರೀಕ್ಷೆ ನಡೆಸಿದ ಪ್ರಾಧಿಕಾರ ಕಡಿತ ಮಾಡಿದೆ.
ಲಭ್ಯವಿರುವ ಸೀಟುಗಳಿಗೆ 1:5ರ ಅನುಪಾತದಲ್ಲಿ ಕೌನ್ಸೆಲಿಂಗ್ ಕರೆಯಲಾಗುತ್ತದೆ. ಈ ಮೊದಲು 1:3ರ ಅನುಪಾತವನ್ನು ರಾಷ್ಟ್ರೀಯ ಕಾನೂನು ಶಾಲೆ ಪಾಲಿಸುತ್ತಿತ್ತು. ಈ ಬಾರಿ ನಿಯಮ ಬದಲಾವಣೆ ಮಾಡಿಕೊಂಡಿದೆ. ಕೌನ್ಸೆಲಿಂಗ್‌ನಲ್ಲಿ ಭಾಗವಹಿಸದ ವಿದ್ಯಾರ್ಥಿಗಳಿಗೆ ಸೀಟು ನೀಡುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕೌನ್ಸೆಲಿಂಗ್ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಿದೆ.