ಕ್ಲಬ್‌ಗಳಲ್ಲಿ ಕ್ರೀಡೆಗೆ ಆದ್ಯತೆ ನೀಡಿ

12 KRN-2
ಕೆ.ಆರ್.ನಗರದಲ್ಲಿ ಸುರಕ್ಷಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್‌ನ್ನು ಶಾಸಕ ಸಾ.ರಾ.ಮಹೇಶ್ ಉದ್ಘಾಟಿಸಿದರು. ಕೆ.ಎನ್.ಬಸಂತ್, ಸಂತೋಷ್, ಬಾರ್ ಹರೀಶ್, ಕೆ.ಆರ್.ಕೃಷ್ಣಮೂರ್ತಿ, ಕೆ.ಎಸ್.ಮಹೇಶ್ ಇತರರು ಇದ್ದರು.
Published on

ಕೆ.ಆರ್.ನಗರ: ಕ್ಲಬ್‌ಗಳಲ್ಲಿ ಮನರಂಜನೆ ಕ್ರೀಡೆಗಳ ಜತೆಗೆ ಆರೋಗ್ಯ ಶಿಬಿರ ಮಾಡುವ ಮೂಲಕ ಬಡಜನರ ಸೇವೆಗೆ ಸಹಾಯಹಸ್ತ ನೀಡುವಂತೆ ಶಾಸಕ ಸಾ.ರಾ.ಮಹೇಶ್ ಸಲಹೆ ನೀಡಿದರು.
ಪಟ್ಟಣದ ಸುರಕ್ಷಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್‌ನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕ್ಲಬ್‌ಗೆ ಸಿಎ ನಿವೇಶನ ನೀಡಲಾಗುವುದು. ರಾಜಕೀಯ ಪಕ್ಷ ಹಾಗೂ ಜಾತಿ ವ್ಯವಸ್ಥೆಯಿಂದ ದೂರ ಇದ್ದರೆ ಕ್ಲಬ್ ಬೆಳೆಯುತ್ತದೆ ಎಂದು ಹೇಳಿದರು.


ಹೆಚ್ಚು ಸದಸ್ಯರನ್ನು ಮಾಡಿಕೊಳ್ಳುವ ಮೂಲಕ ವಿಶಾಲವಾದ ಸ್ಥಳದಲ್ಲಿ ಈಜುಕೊಳ, ವಾಲಿಬಾಲ್, ಕ್ರಿಕೆಟ್ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ. ಜೂಜಾಡುವ ಮೂಲಕ ಮನೆ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.


ಕ್ಲಬ್‌ನ ಅಧ್ಯಕ್ಷ ಸಂತೋಷ್ ಮಾತನಾಡಿ, ಕ್ಲಬ್‌ನ ಸದಸ್ಯರ ಕುಟುಂಬದವರು ಬಂದು ಕಾಲ ಕಳೆಯುವ, ಮನರಂಜನೆ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದರು. ನವ ನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಸುರಕ್ಷಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಉಪಾಧ್ಯಕ್ಷ ಬಾರ್ ಹರೀಶ್, ಕಾರ್ಯದರ್ಶಿ ಕೆ.ಆರ್.ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಕೆ.ಎಸ್.ಮಹೇಶ್, ನಿರ್ದೇಶಕರಾದ ತಿಮ್ಮಪ್ಪ, ಡಿ.ಕಾಂತರಾಜ್, ಎಸ್.ಟಿ.ಕೀರ್ತಿ, ಜಿ.ಆರ್.ಮಹೇಶ್, ಎಚ್.ಡಿ.ಮನುಗೌಡ, ಎಚ್.ಎಸ್.ಶಂಕರ್, ಮಂಜುನಾಥ್, ಕಾಂತರಾಜ್, ಸಿ.ಎನ್.ಭೋಜ್‌ರಾಜ್, ಅಭಿಲಾಷ್, ಹೆಬ್ಬಾಳ್ ಸುಜಯ್, ಶಿಕ್ಷಕ ಕುಚೇಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net