ಕೋಳಕೂರ ಸಿದ್ಧಬಸವೇಶ್ವರರ ಪರ್ವ ಗುರುವಾರ

PH 01
Published on

ಜೇವರ್ಗಿ: ಕೋಳಕೂರ ಗ್ರಾಮದ ಘಾಣದಕಲ್ಲ ಶ್ರೀ ಸಿದ್ಧಬಸವೇಶ್ವರ ಪರ್ವ ಗುರುವಾರ ಜರುಗಲಿದೆ.

ಬೆಳಗ್ಗೆ ಸಿದ್ಧಬಸವೇಶ್ವರ ದೇವಸ್ಥಾನ, ಹೊರವಲಯದ ಘಾಣದಕಲ್ಲ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಮತ್ತು ರುದ್ರಾಭಿಷೇಕ ಬಳಿಕ ಸಿದ್ಧಬಸವೇಶ್ವರ ದೇವಸ್ಥಾನವರೆಗೆ ಪಲ್ಲಕ್ಕಿ ಉತ್ಸವ ಮತ್ತು ನಂದಿಕೋಲು ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ 12ರಿಂದ ಸಂಜೆವರೆಗೆ ಭಕ್ತರಿಗೆ ಭಜ್ಜಿ ಪಲ್ಯೆ, ರೊಟ್ಟಿ ಪ್ರಸಾದ ವಿತರಿಸಲಾಗುತ್ತದೆ.

ಪರ್ವದಲ್ಲಿ 15 ಕ್ವಿಂಟಾಲ್ ಜೋಳದ ರೊಟ್ಟಿ, 20 ಕ್ವಿಂ. ಹೆಸರು, ಕಡಲೆ, ತೊಗರಿ, ತೊಗರಿ ಬೇಳೆ, ಶೇಂಗಾ ಸೇರಿ ವಿವಿಧ ಧಾನ್ಯಗಳೊಂದಿಗೆ ಒಂದು ಟ್ರಾÈಕ್ಟರ್ ತರಕಾರಿ ಬಳಸಿ ಭಜ್ಜಿ ಪಲ್ಯ ಸಿದ್ಧಪಡಿಸಲಾಗುತ್ತಿದೆ ಎಂದು ದೇವಸ್ಥಾನ ಸದ್ಭಕ್ತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net