ಕೋಲಾರದಲ್ಲಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ೧೫೦ ನೇ ಜನ್ಮದಿನ/ತಾಂತ್ರಿಕ ಯುಗ ಹೋಗಿ ಎ.ಐ. ಯುಗ ಬಂದಿದೆ/ ಮುಂದೆ ಮನುಷ್ಯರಿಗೆ ಬೆಲೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ/ಶಾಸಕ ಧೀರಜ್ ಮುನಿರಾಜು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ೧೫೦ ನೇ ಜನ್ಮದಿನದ ಅಂಗವಾಗಿ ಬಿಜೆಪಿ ಪಕ್ಷದ ವತಿಯಿಂದ ಏಕತಾ ನಡಿಗೆ ಕಾರ್ಯಕ್ರಮವನ್ನು ಮಂಗಳವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಗರದ ಡೂಂಲೈಟ್ ವೃತ್ತದಿಂದ ಆರಂಭಗೊAಡ ನಡಿಗೆಗೆ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು. ನಡಿಗೆಯು ಕಠಾರಿಪಾಳ್ಯ, ಎಂಜಿ ರಸ್ತೆಯ ಮೂಲಕ ಗಾಂಧಿವನದ ಬಳಿಗೆ ಮುಕ್ತಾಯಗೊಂಡಿತು.

ಗಾAಧಿವನದ ಬಳಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ತಾಂತ್ರಿಕ ಯುಗ ಹೋಗಿ ಎ.ಐ. ಯುಗ ಬಂದಿದೆ. ಮುಂದೆ ಮನುಷ್ಯರಿಗೆ ಬೆಲೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸಮಾಜವನ್ನು ಒಗ್ಗೂಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಯುವಕರು ಮುಂದಾಗಬೇಕೆAದು ಕರೆ ನೀಡಿದರು.

೨೦೨೫ನೇ ಸಾಲಿನಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವತಿಯಿಂದ ಆರ್‌ಎಸ್‌ಎಸ್ ಜನ್ಮ ಶತಾಬ್ದಿ ಪ್ರಯುಕ್ತ ಎಲ್ಲೆಡೆ ಪಥಸಂಚಲನ, ವಿಜಯೋತ್ಸವ ಆಚರಣೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯಿ ಪಟೇಲ್ ಅವರ ೧೫೦ನೇ ಜನ್ಮದಿನ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ೭೫ ನೇ ಜನ್ಮದಿನ, ವಂದೇಮಾತರA ಗೀತೆ ೧೫೦ ವರ್ಷ ಪೂರೈಸಿರುವುದು ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ದೇಶ ಏಕತೆಯಿಂದ ಇರಲು ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಕಾರಣರಾಗಿದ್ದು, ರೈತರು, ಬಡವರು, ಕಾರ್ಮಿಕರಿಂದಲೇ ಅವರಿಗೆ ಸರ್ದಾರ್ ಎಂಬ ಬಿರುದು ಲಭಿಸಿದ್ದು, ಆರಂಭದಿAದಲೂ ಕಾಂಗ್ರೆಸ್ ಪಕ್ಷದ ಕುತಂತ್ರ ಇಲ್ಲದಿದ್ದರೆ ದೇಶ ಇನ್ನಷ್ಟು ಮುಂದುವರೆಯುತ್ತಿತ್ತು ಎಂದರು.

ಪಟೇಲ್ ಅವರ ರೀತಿಯಲ್ಲೇ ನರೇಂದ್ರ ಮೋದಿ ವಿಕಸಿತ ಭಾರತಕ್ಕೆ ಮುಂದಾಗಿದ್ದಾರೆ. ಆರ್ಥಿಕತೆಯಲ್ಲಿ ಭಾರತವು ೧೪ ರಿಂದ ೫ ನೇ ಸ್ಥಾನಕ್ಕೆ ಬಂದಿದ್ದು, ಎರಡು ವರ್ಷದಲ್ಲಿ ೩ ನೇ ಸ್ಥಾನಕ್ಕೆ ತೆರಳಲಿದೆ. ಹಾಗೆಯೇ ವಿಶ್ವದ ದೊಡ್ಡಣ್ಣ ಅಮೇರಿಕವನ್ನು ಮೀರಿಸಲಿದ್ದು, ವಿಕಸಿತ ಭಾರತದ ಕನಸು ನನಸಾಗಲು ಯುವಕರು ಪಣತೊಡಬೇಕು ಎಂದು ಹೇಳಿದರು.

ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಬಗ್ಗು ಬಡಿಯಲು ಮುಂಬರುವ ಎಲ್ಲ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಸಂಘವನ್ನು ಬಲಪಡಿಸಬೇಕು. ಕೋಲಾರದ ಕ್ಲಾಕ್ ಟವರ್ ನಲ್ಲಿ ತ್ರಿವರ್ಣ ಧ್ವಜ ಬರಲು ನೀವು ಮತನೀಡಿ ಎಸ್.ಮುನಿಸ್ವಾಮಿ ಅವರನ್ನು ಗೆಲ್ಲಿಸಿದ್ದೇ ಕಾರಣವಾಗಿದ್ದು, ನಾವೆಲ್ಲರೂ ಒಂದು ಭಾರತ ಶ್ರೇಷ್ಠ ಕನಸಿಗೆ ಮುಂದಾಗೋಣ ಎಂದರು.

ಆರ್.ಎಸ್.ಎಸ್. ಅನ್ನು ನಿಷೇಧ ಮಾಡಲು ಕಾಂಗ್ರೆಸ್‌ನವರಿAದ ಸಾಧ್ಯವಿಲ್ಲ. ಸಮೀಕ್ಷೆ ವಿಫಲ ಸೇರಿದಂತೆ ಸರ್ಕಾರದ ಲೋಪದೋಷಗಳ ವಿಚಾರ ಮರೆಮಾಚುವ ಸಲುವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಬಳಸಿಕೊಂಡು ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಆರ್.ಎಸ್.ಎಸ್.ನಲ್ಲಿ ನಡೆಯುವ ಪರಿಚಯ ವರ್ಗ ಎಂಬ ಶಿಬಿರಕ್ಕೆ ಪ್ರಿಯಾಂಕ್ ಖರ್ಗೆ ಒಮ್ಮೆ ಬಂದಲ್ಲಿ ಜೀವನದಲ್ಲಿ ಎಂದಿಗೂ ಸಂಘದ ಬಗ್ಗೆ ಮಾತನಾಡದೆ, ಡಿಸಿಎಂ ಡಿ.ಕೆ.ಶಿವಕುಮಾರ್ ರಂತೆ ಸುಮ್ಮನಾಗುತ್ತಾರೆ ಎಂದು ಟಾಂಗ್ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಿರಾಜು, ಬಿ.ವಿ.ಮಹೇಶ್, ಮುಖಂಡರಾದ ಬಾಲಾಜಿ, ಕಪಾಲಿ ಶಂಕರ್, ತಿಮ್ಮರಾಯಪ್ಪ, ಅರುಣಮ್ಮ, ಪದ್ಮ, ಮಮತ ಮುಂತಾದವರಿದ್ದರು.

ಚಿತ್ರ ೦೪ ಕೆ.ಎಲ್.ಆರ್. ೦೩ ಬಿಜೆಪಿ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಏಕತಾ ನಡಿಗೆ ಕಾರ್ಯಕ್ರಮಕ್ಕೆ ದೊಡ್ಡಬಳ್ಳಾಪುರ ಶಾಸಕ ಧೀರಜ್ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ, ಮಾಜಿ ಸಂಸದ ಎಸ್.ಮುನಿಸ್ವಾಮಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net