ವಿಜಯವಾಣಿ ಸುದ್ದಿಜಾಲ ಕೋಲಾರ
ಬೇಸಿಗೆ ಕಾಲ ಇನ್ನು ನಾಲ್ಕು ತಿಂಗಳು ಬಾಕಿ ಇರುವಾಗಲೇ ಕೋಲಾರ ಜಿಲ್ಲೆಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಇದರಿಂದ ರೈತರು ಮತ್ತು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಕಳೆದ ಒಂದು ವಾರದಿಂದ ಕೋಲಾರ ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಹೆಚ್ಚಾಗಿದ್ದು, ಸಂಜೆಯಾದರೆ ವಿದ್ಯುತ್ ತೆಗೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇನ್ನೇನು ಪರೀಕ್ಷೆಗಳು ಹತ್ತಿರ ಬರುತ್ತಿರುವಾಗಲೇ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ರಾತ್ರಿ ವೇಳೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಸಂಜೆ ಅಲ್ಲದೆ ದಿನವೀಡೀ ಆಗಾಗ ವಿದ್ಯುತ್ ಲೋಡ್ ಶೆಡ್ಡಿಂಗ್ ಆಗುತ್ತಲೇ ಇರುತ್ತದೆ. ರೈತರಿಗೆ ಇದರಿಂದ ತೊಂದರೆಯಾಗಿದ್ದು, ಮಳೆಯಿಲ್ಲದೆ ಬರ ಆವರಿಸಿರುವ ಹಿನ್ನೆಲಯಲ್ಲಿ ಆಗಾಗ ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ರೈತರು ಬೆಳೆಯುತ್ತಿರುವ ತರಕಾರಿ ಮತ್ತು ಟಮೋಟೋ ಬೆಳೆಗಳಿಗೆ ನೀರಿಲ್ಲದಂತೆ ಆಗಿದೆ.
ಈಗಾಗಲೇ ತರಕಾರಿಗಳಿಗೆ ಮತ್ತು ಟಮೇಟೋ, ಹೂವು ಬೆಳೆಗಳಿಗೆ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಈ ಹಂತದಲ್ಲಿ ಇರುವ ಬೆಳೆಗಳನ್ನು ಕಾಪಾಡಿಕೊಳ್ಳಲು ವಿದ್ಯುತ್ ಆಗಾಗ ಕೈಕೊಡುತ್ತಿರುವುದರಿಂದ ಇರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಂದ ಸಾಧ್ಯವಾಗಿಲ್ಲ.
ವಾರಕ್ಕೆ ಎರಡು ಬಾರಿ ದುರಸ್ತಿ ಕಾರ್ಯ ಇದೆ ಎಂದು ಬೆಸ್ಕಾಂ ಇಲಾಖೆಯವರು ಇಡೀ ಜಿಲ್ಲೆಯಲ್ಲಿ ವಿದ್ಯುತ್‌ನ್ನು ದಿನವಿಡೀ ತೆಗೆಯುತ್ತಿದ್ದಾರೆ. ಇದರ ಮಧ್ಯೆ ಇರುವ ದಿನಗಳಲ್ಲಿಯೂ ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ವಿದ್ಯುತ್‌ನ್ನು ಆಗಾಗ ಕಟ್ ಮಾಡುತ್ತಿರುವುದರಿಂದ ಸಾರ್ವಜನಿಕರು ಬೆಸ್ಕಾಂ ಇಲಾಖೆ ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ.
ಬಾಕ್ಸ್
ಕೋಲಾರದಲ್ಲಿ ಪವರ್ ಸ್ಟೇಷನ್ ಇದ್ದರೂ ಬೇಸಿಗೆ ಬರುವ ಮೊದಲು ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಪ್ರಾರಂಭವಾಗಿದೆ. ಸಂಜೆಯ ಸಮಯದಲ್ಲಿ ನಗರ ಪ್ರದೇಶಗಳಲ್ಲಿ ವಿದ್ಯುತ್ ತೆಗೆಯುತ್ತಿರುವುದರಿಂದ ಸಾರ್ವಜನಿಕರಿಗೆ ವ್ಯಾಪಾರ ವಹಿವಾಟುಗಳಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈಗಲೇ ಈ ರೀತಿಯಾಗಿ ಬೇಸಿಗೆ ಕಾಲ ಬಂದರೆ ಇವರು ವಿದ್ಯುತ್ ನೀಡುತ್ತಾರೆಯೇ? ಸರ್ಕಾರ ಭಾಗ್ಯಗಳನ್ನು ನಿಲ್ಲಿಸಿ ವಿದ್ಯುತ್ತನ್ನು ನೀಡಲೀ ಎಂದು ಸಾರ್ವಜನಿಕರು ಒತ್ತಾಯಪಡಿಸುತ್ತಿದ್ದಾರೆ.
ಬಾಕ್ಸ್
ಭಾನುವಾರ ಇಡೀ ದಿನ ದುರಸ್ತಿ ನೆಪದಲ್ಲಿ ಕೋಲಾರ ಜಿಲ್ಲೆಯಾದ್ಯಂತ ವಿದ್ಯುತ್ ನಿಲ್ಲಿಸಿದ್ದ ಕಾರಣ ಸಾರ್ವಜನಿಕರು ಬೆಸ್ಕಾಂ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುವಂತಾಯಿತು, ಸಾರ್ವಜನಿಕರಿಗೆ ವಿದ್ಯುತ್ ಅಗತ್ಯ ಇರುವ ದಿನಗಳಲ್ಲಿ ಮತ್ತು ಸಮಯಗಳಲ್ಲಿಯೇ ವಿದ್ಯುತ್‌ನ್ನು ಉಳಿತಾಯ ಮಾಡುವ ನೆಪದಲ್ಲಿ ತೆಗೆಯುತ್ತಿರುವುದರಿಂದ ವಿದ್ಯುತ್ ಸಮಸ್ಯೆ ಸಾರ್ವಜನಿಕರನ್ನು ಕಾಡುವಂತಾಗಿದೆ.
ಕೋಟ್
ವಿದ್ಯುತ್ ಸರಬರಾಜಿಗಿಂತ ಬೇಡಿಕೆ ಹೆಚ್ಚಾಗಿದೆ. ಇದು ಕೋಲಾರದ ಸಮಸ್ಯೆಯಲ್ಲ ಇಡೀ ರಾಜ್ಯ ಮತ್ತು ದೇಶದ ಸಮಸ್ಯೆ ಸಿಕ್ಕೀಂ ಮತ್ತು ಅಸ್ಸಾಂ ರಾಜ್ಯಗಳನ್ನು ಬಿಟ್ಟರೆ ದೇಶದಲ್ಲಿ ಮಳೆಯ ಅಭಾವದಿಂದ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ರಾಜ್ಯದಲ್ಲಿನ ವಿದ್ಯುತ್ ಉತ್ಪಾದನಾ ಕೇಂದ್ರಗಳ ಸರೋವರಗಳನ್ನು ನೀರಿನ ಮಟ್ಟ ಕಡಿಮೆಯಾಗಿದೆ. ಗಾಳಿ ಮಳೆ ಕಡಿಮೆ ಇರುವುದರಿಂದ ವಿಂಡ್‌ಗಳಿAದ ಉತ್ಪತ್ತಿಯಾಗುವ ವಿದ್ಯುತ್ ಕಡಿಮೆಯಾಗಿದೆ. ಸೋಲಾರ್ ಪ್ಲಾಂಟ್‌ಗಳಿAದ ಮಧ್ಯಾಹ್ನ ಸಂದರ್ಭದಲ್ಲಿ ವಿದ್ಯುತ್ ಸರಬರಾಜಾಗುತ್ತಿದೆ. ಸಂಜೆ ಸಯಮದಲ್ಲಿ ಸೋಲಾರ್ ಪ್ಲಾಂಟ್‌ಗಳಿAದ ವಿದ್ಯುತ್ ಉತ್ಪಾದನೆ ಕಡಿಯಾಗುತ್ತಿರುವುದರಿಂದ ನಗರ ಪ್ರದೇಶದಲ್ಲಿ ಸಂಜೆ ಸಮಯದಲ್ಲಿ ವಿದ್ಯುತ್‌ನ್ನು ಅನಿವಾರ್ಯ ಕಾರಣಗಳಿಂದ ಕಡಿತ ಮಾಡಬೇಕಾಗುತ್ತದೆ.
-ನಟರಾಜ್, ಕಾರ್ಯನಿವಾಹಕ ಇಂಜಿನೀಯರ್, ಬೆಸ್ಕಾಂ, ಕೋಲಾರ.
ಚಿತ್ರ ೧೦ ಕೆ.ಎಲ್.ಆರ್. ೦೫ : ಕೋಲಾರ ಪವರ್ ಸ್ಟೇಷನ್