ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರಕ್ಕೆ ವರ್ತುಲ ರಸ್ತೆ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದಿದ್ದ ಯೋಜನೆ, ನಗರ ಬೆಳೆದಿದ್ದರೂ ಆ ಯೋಜನೆಗೆ ಮಾತ್ರ ಹಸಿರು ನಿಶಾನೆ ಸಿಕ್ಕಿರಲಿಲ್ಲ. ಈಗ ಸುಮಾರು ನೂರು ಕೋಟಿ ರೂಪಾಯಿ ಅನುದಾನದಲ್ಲಿ ವರ್ತುಲ ರಸ್ತೆ ನಿರ್ಮಾಣಕ್ಕೆ ಯೋಜನೆ ಸಿದ್ದವಾಗಿತ್ತಾದರೂ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್ ಆಗಿ ಮತ್ತೆ ವರ್ತುಲ ರಸ್ತೆಗೆ ಗ್ರಹಣ ಹಿಡಿದಂತಾಗಿದೆ.
ಕಿರಿದಾದ ರಸ್ತೆಗಳು, ಪ್ರತಿದಿನ ಸಾಲುಗಟ್ಟೆ ನಿಂತಿರುವ ಲಾರಿಗಳು, ವಾಹನ ದಟ್ಟಣೆಯಿಂದ ಕಿರಿಕಿರಿ ಅನುಭವಿಸುತ್ತಿರುವ ವಾಹನ ಸವಾರರು, ಇದೆಲ್ಲಾ ದೃಶ್ಯಗಳು ಕಂಡು ಬರುವುದು. ಕೋಲಾರದಲ್ಲಿ.
ಕೋಲಾರ ನಗರ ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿದ್ದರೂ ಸಹ ಕೋಲಾರ ಜಿಲ್ಲೆ ಈಗಲೂ ದೊಡ್ಡ ಹಳ್ಳಿಯಂತಿದೆ. ಕೋಲಾರ ನಗರದ ಮೇಲೆ ಒತ್ತಡ ಕಡಿಮೆ ಮಾಡಲು ವರ್ತುಲ ರಸ್ತೆ ಮಾಡಲು ಕಳೆದ ೨೦ ವರ್ಷಗಳ ಹಿಂದೆ ಕ್ರಿಯಾಯೋಜನೆ ತಯಾರು ಮಾಡಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿತ್ತು.
ಆದರೆ ಯೋಜನೆ ಮಾತ್ರ ಅನುಷ್ಟಾನಗೊಂಡಿರಲಿಲ್ಲ, ಈ ಹಿನ್ನಲೆಯಲ್ಲಿ ಹಳೇ ಯೋಜನೆಯನ್ನು ಕೈ ಬಿಟ್ಟು ಈಗ ಹೊಸದಾದ ಕ್ರಿಯಾಯೋಜನೆ ತಯಾರು ಮಾಡಲಾಗಿದ್ದು. ಇದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯ ನಗರಾಭಿವೃದ್ದಿ ಇಲಾಖೆಗೆ ೨೫೦ ಕೋಟಿ ರೂ ಹಣ ಬಿಡುಗಡೆ ಮಾಡಿತ್ತು. ಆ ಹಣದಲ್ಲಿ ನಗರಾಭಿವೃದ್ದಿ ಸಚಿವ ಹಾಗೂ ಕೋಲಾರ ಜಿಲ್ಲಾಉಸ್ತುವಾರಿ ಸಚಿವ ಬೈರತಿ ಸುರೇಶ್ ತಮ್ಮ ಇಲಾಖೆಗೆ ಬಿಡುಗಡೆಯಾಗಿದ್ದ ಹಣದಲ್ಲಿ ೨೫೦ ಕೋಟಿ ರೂ ಹಣದಲ್ಲಿ ೧೦೦ ಕೋಟಿಯನ್ನು ಕೋಲಾರದ ನೂತನ ರಿಂಗ್ ರೋಡ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದರು.
ಯೋಜನೆ ಡಿಪಿಆರ್ ಆಗಿ ಹೊಸ ಸರ್ವೆ ಕಾರ್ಯ ಮುಗಿಸಿದ್ದ ಅಧಿಕಾರಿಗಳು ಇನ್ನೇನು ಕ್ಯಾಬಿನೆಟ್ ಅನುಮತಿ ಪಡೆದು ಟೆಂಡರ್ ಹಾಗೂ ಭೂಸ್ವಾಧಿನ ಪ್ರಕ್ರಿಯೆ ಶುರು ಮಾಡಬೇಕಿತ್ತು, ಈ ಹಂತದಲ್ಲಿ ಕೇಂದ್ರ ಸರ್ಕಾರ ರಾಜ್ಯದ ನಗರಾಭಿವೃದ್ದಿ ಇಲಾಖೆಗೆ ಬಿಡುಗಡೆ ಮಾಡಿದ್ದ ೨೫೦ ಕೋಟಿ ಹಣವನ್ನು ವಾಪಸ್ ಪಡೆದುಕೊಳ್ಳುವ ಮೂಲಕ ಶಾಕ್ ನೀಡಿದೆ. ಇದರಿಂದ ಈಗಾಗಲೇ ಅ ಹಣದಲ್ಲಿ ಹಲವು ಯೋಜನೆಗಳನ್ನು ಪ್ಲಾನ್ ಮಾಡಿದ್ದ ಸಚಿವ ಬೈರತಿ ಸುರೇಶ್ ಈಗ ರಾಜ್ಯದ ಅನುಧಾನದಲ್ಲೇ ರಿಂಗ್ ರಸ್ತೆ ನಿರ್ಮಾಣಕ್ಕೆ ಪ್ಲಾನ್ ಮಾಡುವುದಾಗಿ ಹೇಳಿದ್ದಾರೆ.
ಕೋಟ್
ಕೋಲಾರ ನಗರದ ಅಭಿವೃದ್ದಿ ದೃಷ್ಟಿಯಿಂದ ಮುಂದಿನ ೨೫ ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಕೋಲಾರದಿಂದ ೯ ಕಿ.ಮೀ. ಹೊರಗೆ ವರ್ತುಲ ರಸ್ತೆ ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗಿತ್ತು. ಒಟ್ಟು ಸುಮಾರು ೩೦ ಕಿ.ಮೀ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಇಪ್ಪತ್ತು ವರ್ಷಗಳ ಹಿಂದೆ ಮಾಡಲು ಉದ್ದೇಶಿಸಿದ್ದ ರಿಂಗ್ ರಸ್ತೆ ಪ್ಲಾನ್ ಕೈಬಿಟ್ಟು ಈಗ ಹೊಸದಾಗಿ ರಿಂಗ್ ರೋಡ್ ಪ್ಲಾನ್ ಮಾಡಲಾಗಿದೆ. ಅದಕ್ಕಾಗಿ ಹೊಸ ನೀಲ ನಕ್ಷೆ ಸಿದ್ದಪಡಿಸಿದೆ, ಅದರಂತೆ ಕೋಲಾರ ನಗರದಿಂದ ೯ ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ-೭೫ ಬೆಂಗಳೂರು ರಸ್ತೆ ನಾಗಲಾಪುರದಿಂದ ಆರಂಭವಾಗಿ ಚಿಕ್ಕಬಳ್ಳಾಪುರ ಮುಖ್ಯರಸ್ತೆ, ಚಿಂತಾಮಣಿ ಮುಖ್ಯರಸ್ತೆ, ಶ್ರೀನಿವಾಸಪುರ ಮುಖ್ಯ ರಸ್ತೆ ಮೂಲಕ, ರಾಷ್ಟ್ರೀಯ ಹೆದ್ದಾರಿ-೭೫ ರ ಮತ್ತೊಂದು ಬಾಗದ ಮುಳಬಾಗಲು ಹೆದ್ದಾರಿಗೆ ಬಂದು ತಲುಪುವ ಮೂಲಕ ಇಡೀ ನಗರ ಹಾಗೂ ಹೆದ್ದಾರಿಗೆ ಕನೆಕ್ಟ್ ಮಾಡುವ ಮೂಲಕ ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಜೊತೆಗೆ ನಗರವನ್ನು ವಿಸ್ತರಣೆ ಮಾಡುವುದು ಇದರ ಉದ್ದೇಶ ಹಾಗಾಗಿ ಕೋಲಾರ ನಗರದ ಅಭಿವೃದ್ದಿ ದೃಷ್ಟಿಯಿಂದ ಈ ರಸ್ತೆ ಬಹಳ ಮುಖ್ಯವಾಗಿದ್ದು ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಹಣವನ್ನು ಬಿಡುಗಡೆ ಮಾಡಬೇಕು ಅನ್ನೋದು ಕೋಲಾರದ ಜನ ಹಾಗೂ ಜನಪ್ರತಿನಿಧಿಗಳ ಆಗ್ರಹವಾಗಿದೆ.
-ಬಿ.ಎಸ್.ಸುರೇಶ್ ಜಿಲ್ಲಾ ಉಸ್ತುವಾರಿ ಸಚಿವರು
ಕೋಟ್
ಕಳೆದ ೨ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಕೋಲಾರ ರಿಂಗ್ ರೋಡ್ ಕೆಲಸ ಏಕಾಏಕಿ ಚುರುಕು ಪಡೆದುಕೊಂಡಿತ್ತು, ಆದರೆ ಕೇಂದ್ರ ಸರ್ಕಾರ ಹಣ ವಾಪಸ್ ಪಡೆಯುವ ಮೂಲಕ ಈಗ ಕೋಲಾರದ ಮಹತ್ವದ ಯೋಜನೆ ಮತ್ತೆ ನೆನಗುದಿಗೆ ಬಿದ್ದಿದೆ. ಕೂಡಲೇ ಕೇಂದ್ರ ಹಣ ಬಿಡುಗಡೆ ಮಾಡಿ ಯೋಜನೆ ಮುಂದುವರೆಸಲು ಸಹಕರಿಸಬೇಕಾಗಿದೆ.
-ಕೊತ್ತೂರು ಮಂಜುನಾಥ್, ಶಾಸಕ.
ಚಿತ್ರ ೨೪ ಕೆ.ಎಲ್.ಆರ್. ೦೭ : ಕೋಲಾರದ ವರ್ತುಲ ರಸ್ತೆಯ ನೀಲಿನಕ್ಷೆ ಚಿತ್ರ
ಚಿತ್ರ ೨೪ ಕೆ.ಎಲ್.ಆರ್. ೦೭ಎ : ಕೊತ್ತೂರು ಮಂಜುನಾಥ್, ಶಾಸಕ ರವರ ಭಾವಚಿತ್ರ
ಚಿತ್ರ ೨೪ ಕೆ.ಎಲ್.ಆರ್. ೦೭ಬಿ : ಬಿ.ಎಸ್.ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವರ ಭಾವಚಿತ್ರ