ಕೋಲಾರಕ್ಕೆ ಮಾ.೧ಕ್ಕೆ ಪೇಜಾವರ ಶ್ರೀಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಉಡುಪಿ ಪೇಜಾವರ ಮಠದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿ ವಿಶ್ವಪ್ರಸನ್ನ ತೀರ್ಥರು ಮಾ.೧ ನಗರದ ಬ್ರಾಹ್ಮಣರ ಬೀದಿಯ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಆಗಮಿಸಲಿದ್ದಾರೆ ಎಂದು ಮಠದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಮಾ.೧ ಶನಿವಾರ ಬೆಳಗ್ಗೆ ೮.೩೦ಕ್ಕೆ ಆಗಮಿಸುವ ಪೇಜಾವರ ಮಠದ ಶ್ರೀಗಳು ಪ್ರವಚನ ಹಾಗೂ ಅಮೃತೋಪದೇಶ ನೀಡುವರು. ಭಕ್ತಾದಿಗಳು ಸರಿಯಾದ ಸಮಯಕ್ಕೆ ಬಂದು ಶ್ರೀಗಳ ಆಶೀರ್ವಾದ ಪಡೆಯಬೇಕೆಂದು ಕೋರಿದ್ದಾರೆ.

ಚಿತ್ರ ೨೭ ಕೆ.ಎಲ್.ಆರ್. ೦೫ : ಮಾ.೧ ಕೋಲಾರಕ್ಕೆ ಪೇಜಾವರ ಶ್ರೀಗಳು ಆಗಮಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net