ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಕೋಲಾರ ಹಾಲು ಒಕ್ಕೂಟಕ್ಕೆ ಜೂ.೨೫ ರಂದು ಚುನಾವಣೆ ನಡೆಯಲಿದೆ. ಜೂ.೯ ರಂದು ಚುನಾವಣಾ ವೇಳಾಪಟ್ಟಿ ಪ್ರಕಟಣೆ ಮಾಡುವ ಸಾಧ್ಯತೆ ಇದ್ದು, ಈಗಾಗಲೇ ಕರಡು ಮತದಾನ ಪಟ್ಟಿಯನ್ನು ತಯಾರಿಸಿ ಆಕ್ಷೇಪಣೆಗೆ ಅವಕಾಶ ನೀಡಿದ್ದು, ಸಾಧಕ ಬಾಧಕಗಳನ್ನು ಚರ್ಚಿಸಿ ಜೂ.೫ ರ ಒಳಗಾಗಿ ಅಂತಿಮ ಮತದಾರರ ಪಟ್ಟಿ ತಯಾರಿಸುವ ಸಾಧ್ಯತೆ ಇದೆ.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆಯಾದ ನಂತರ ಪ್ರಥಮ ಬಾರಿಗೆ ಕೋಲಾರ ಹಾಲು ಒಕ್ಕೂಟ ಪ್ರತ್ಯೇಕಗೊಂಡ ನಂತರ ಚುನಾವಣೆ ಜೂ.೨೫ ರಂದು ನಡೆಯಲಿದೆ. ೧೩ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಇದರಲ್ಲಿ ೨ ಸ್ಥಾನವನ್ನು ಮಹಿಳಾ ಮೀಸಲು ಸ್ಥಾನವನ್ನಾಗಿ ವಿಂಗಡಣೆ ಮಾಡಲಾಗಿದೆ.
ಜೂ.೨೫ ರಂದು ಚುನಾವಣೆ ನಿಗಧಿಯಾಗಿರುವುದರಿಂದ ೧೫ ದಿನಗಳ ಮುಂಚಿತವಾಗಿ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಅಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಪ್ರಕಟಣೆ ಮಾಡಬೇಕಾಗಿದೆ. ಜೂ.೯ ರಂದು ಚುನಾವಣಾ ವೇಳಾಪಟ್ಟಿ ಪ್ರಕಟಣೆಯಾದ ನಂತರ ಚುನಾವಣೆ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದೆ.
ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಜಿಲ್ಲೆಯ ಪ್ರತಿಷ್ಟಿತ ೨ ಸಹಕಾರಿ ಸಂಸ್ಥೆಗಳಾಗಿದ್ದು, ಕ್ಷೇತ್ರ ವಿಂಗಡಣೆ ಸೇರಿದಂತೆ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಡೆಸಿದ ಲೋಪಗಳನ್ನು ಸರಿಪಡಿಸಲು ನ್ಯಾಯಾಲ್ಯದ ಮಟ್ಟಿಲೇರಿದ್ದು, ನ್ಯಾಯಾಲಯದ ಆದೇಶದಮತೆ ಎರಡೂ ಸಂಸ್ಥೆಗಳಿಗೆ ಚುನಾವಣೆ ನಿಗಧಿಯಾಯಿತು.
ಈಗಾಗಲೇ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಮುಕ್ತಾಯಗೊಂಡಿದೆ. ಕೋಮುಲ್ ಚುನಾವಣೆ ನ್ಯಾಯಾಲಯದ ಆದೇಶದಂತೆ ಜೂ.೨೫ ರಂದು ನಡೆಯಬೇಕಾಗಿದೆ. ಅದಕ್ಕಾಗಿ ಪೂರ್ವಸಿದ್ಧತೆಗಳು ನಡೆಯುತ್ತಿವೆ.
ಡಿಸಿಸಿ ಬ್ಯಾಂಕ್ ಚುನಾವಣೆ ಮೂಡ್‌ನಿಂದ ಹೊರ ಬರದ ಮುಖಂಡರು :
ಕಳೆದ ತಿಂಗಳು ಮೇ.೨೮ ರಂದು ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯಿತು. ಈ ಚುನಾವಣೆಯನ್ನು ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಪ್ರತಿಷ್ಟಿತೆಯಾಗಿ ತೆಗೆದುಕೊಂಡಿದ್ದು, ಕಾಂಗ್ರೇಸ್‌ನಲ್ಲಿಯೂ ಎರಡು ಗುಂಪುಗಳಾದ ಕಾರಣ ಯಾವ ಪಕ್ಷಕ್ಕೂ ಸ್ಪಷ್ಪ ಬಹುಮತ ಬಂದಿಲ್ಲ. ಕಾಂಗ್ರೇಸ್‌ನ ೨ ಗುಂಪುಗಳು ಒಂದಾದರೆ ಕಾಂಗ್ರೇಸ್ ತೆಕ್ಕೆಗೆ ಡಿಸಿಸಿ ಬ್ಯಾಂಕ್ ಹೋಗಲಿದೆ.
ಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದು ಇನ್ನೂ ಒಂದು ವಾರ ಕಳೆದಿಲ್ಲ. ಆದರೂ ಸಹ ಇನ್ನೂ ಡಿಸಿಸಿ ಬ್ಯಾಂಕ್ ಚುನಾವಣೆಯ ಲೆಕ್ಕಾಚಾರದಲ್ಲಿ ಮುಖಂಡರು ತೊಡಗಿಸಿಕೊಂಡಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಮುಖಂಡರು ಅಂದುಕೊAಡAತೆ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಕಾರಣ ಕೋಮುಲ್ ಚುನಾವಣೆ ಯಾವ ರೀತಿ ಎದುರಿಸುವುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ರಂಗೇರಿದ ಕೋಮುಲ್ :
ಈಗಾಗಲೇ ಕೋಮುಲ್ ಚುನಾವಣೆಗಾಗಿ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯಾ ಪಕ್ಷದ ಮುಖಂಡರು ಆಯ್ಕೆ ಮಾಡಿದ್ದು, ಈಗಾಗಲೇ ಅವರು ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.
ಮಾಲೂರು ತಾಲ್ಲೂಕಿನಲ್ಲಿ ಹಾಲಿ ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅಭ್ಯಾರ್ಥಿಯಾಗುವುದು ಖಚಿತವಾಗಿದೆ. ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಒಂದು ಕ್ಷೇತ್ರಕ್ಕೆ ಮಾಜಿ ನಿರ್ದೇಶಕ ಎನ್.ಹನುಮೇಶ್ ಅಭ್ಯರ್ಥಿ ಆಗುವುದು ಖಚಿತವಾಗಿದೆ. ಅದೇ ರೀತಿ ಮುಳಬಾಗಿಲಿನ ಒಂದು ಕ್ಷೇತ್ರದಿಂದ ಮಾಜಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಬೇತಮಂಗಲದ ಮಾಜಿ ನಿರ್ದೇಶಕ ಜಯಸೀಮೆ ಕೃಷ್ಣಪ್ಪ ಇವರುಗಳು ಸಹ ಅಭ್ಯರ್ಥಿಗಳಾಗುವುದು ಖಚಿತವಾಗಿದೆ. ಹಾಗೂ ಮತ್ತೊಬ್ಬ ಮಾಜಿ ನಿರ್ದೇಶಕ ವಡಗೂರು ಬಿ.ವಿ.ಹರೀಶ್ ಸ್ಪರ್ಧೆಗೆ ಮುಂದಾಗಿದ್ದರೂ ಇನ್ನು ಅಂತಿಮಗೊಳ್ಳಬೇಕಾಗಿದೆ.
ಉಳಿದಂತೆ ವಿವಿಧ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳ ಆಯ್ಕೆ ಆಗಬೇಕಾಗಿದೆ. ಚುನಾವಣೆ ವೇಳಾಪಟ್ಟಿ ಪ್ರಕಟವಾದ ನಂತರ ತರಾತುರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಆಯಾ ಪಕ್ಷಗಳ ಮುಖಂಡರು ನಡೆಸಲಿದ್ದಾರೆ.
೧೩ ಕ್ಷೇತ್ರಗಳು :
ಕೋಮುಲ್‌ಗೆ ಮಹಿಳಾ ಮೀಸಲು ೨ ಕ್ಷೇತ್ರ ಸೇರಿದಂತೆ ೧೩ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗಿದ್ದು, ಕೋಲಾರಕ್ಕೆ ೩ ಕ್ಷೇತ್ರ, ಶ್ರೀನಿವಾಸಪುರ, ಮಾಲೂರು, ಮುಳಬಾಗಿಲು ತಲಾ ೨ ಕ್ಷೇತ್ರ ಹಾಗೂ ಕೆ.ಜಿ.ಎಫ್. ಮತ್ತು ಬಂಗಾರಪೇಟೆ ತಲಾ ಒಂದೊAದು ಕ್ಷೇತ್ರ ಸೇರಿದಂತೆ ೨ ಮಹಿಳಾ ಮೀಸಲು ಕ್ಷೇತ್ರಗಳು ಸೇರಿ ಒಟ್ಟು ೧೩ ಕ್ಷೇತ್ರಗಳಾಗಿ ವಿಂಗಡಣೆ ಮಾಡಲಾಗಿದೆ.
೯೮೭ ಮತದಾರರ ಕರಡು ಪಟ್ಟಿ :
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ೯೮೭ ಹಾಲು ಡೈರಿಗಳು ಚುನಾವಣೆಗೆ ಅರ್ಹ ಎಂದು ನಿಗಧಿಪಡಿಸಿದ್ದು, ಕರಡು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಂದೊAದು ಹಾಲು ಡೈರಿಯಿಂದ ಒಬ್ಬರು ಮಾತ್ರ ಡೆಲಿಗೇಷನ್ ಪಡೆದು ಚುನಾವಣೆಯಲ್ಲಿ ಮತ ಚಲಾವಣೆ ಮಾಡಲು ಅವಕಾಶ ಇದೆ.
ಚಿತ್ರ ೦೩ ಕೆ.ಎಲ್.ಆರ್. ೦೨ : ಕೋಮುಲ್ ಕಛೇರಿ ಚಿತ್ರ