ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ದೇವಸ್ಥಾನಗಳ ಜೀರ್ಣೋದ್ಧಾರದ ಮೂಲಕ ಧರ್ಮವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ / ಕೋಡಿ ಮಠದ ಸ್ವಾಮೀಜಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ರವರು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಧರ್ಮವನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತಷ್ಟು ದೇವಸ್ಥಾನಗಳ ಜೀರ್ಣೋದ್ಧಾರ ಕೆಲಸಗಳನ್ನು ಮಾಡುವಂತೆ ಭಗವಂತ ಪ್ರೇರಣೆ ನೀಡಲಿ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ತಿಳಿಸಿದರು.

ಕೋಲಾರ ತಾಲ್ಲೂಕಿನ ಲಕ್ಷಿö್ಮÃಸಾಗರ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಧರ್ಮವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ. ಧರ್ಮ ಉಳಿದರೆ ನಾವು ಉಳಿಯುತ್ತೇವೆ. ಆ ಕೆಲಸವನ್ನು ಕೋಲಾರ ಕ್ಷೇತ್ರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಮಾಡುತ್ತಿದ್ದಾರೆ ಎಂದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ದೇವರನ್ನು ನಂಬಿದರೆ ದೇವರು ನಮ್ಮ ಕೈಬಿಡುವುದಿಲ್ಲ. ದೇವರ ಕೆಲಸಗಳಲ್ಲಿ ಎಲ್ಲರೂ ಭಾಗಿಯಾಗಬೇಕು. ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನನ್ನ ಕೈಲಾದ ಸಹಾಯವನ್ನು ಮಾಡಿಕೊಂಡು ಬರುತ್ತಿದ್ದೇನೆ. ದೇವರ ಆರ್ಶೀವಾದ ಮತ್ತು ಜನರ ಆಶೀರ್ವಾದ ಸದಾ ಬೇಕಾಗುತ್ತದೆ ಎಂದರು.

ಎಂ.ಎಲ್.ಸಿ ಅನಿಲ್‌ಕುಮಾರ್ ಮಾತನಾಡಿ, ಕೋಡಿ ಮಠದ ಸ್ವಾಮಿಜಿಯವರು ಹೇಳಿದಂತೆ ನಡೆಯುತ್ತದೆ. ಈ ಹಿಂದೆ ಕೋಲಾರ ಜಿಲ್ಲೆಗೆ ಆಗಮಿಸಿದಾಗ ಕೋಲಾರ ಜಿಲ್ಲೆ ಕೆರೆಗಳು ಕೋಡಿ ಬೀಳುತ್ತವೆಂದು ಭವಿಷ್ಯ ನುಡಿದಿದ್ದರು. ಆದರೆ ಮಳೆ ಬಾರದಿದ್ದರೆ ಕೆ.ಸಿ.ವ್ಯಾಲಿ ನೀರಿನಿಂದ ಕೆರೆಗಳು ಕೋಡಿ ಹೋದವು. ಹಾಲು ಕೆಟ್ಟರು ಹಾಲು ಮತಸ್ಥರು ಕೆಡುವುದಿಲ್ಲ ಎಂದು ಸ್ವಾಮೀಜಿ ತಿಳಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ದೆಹಲಿಗೆ ಹೋಗಿಬಂದ ನಂತರ ಮತ್ತೆ ನಾನೇ ೫ ವರ್ಷ ಮುಖ್ಯಮಂತ್ರಿಗಳು ಎಂದು ತಿಳಿಸಿದ್ದಾರೆ. ಆದ್ದರಿಂದ ಕೋಡಿ ಮಠದ ಸ್ವಾಮಿಗಳು ನುಡಿಯುವ ಭವಿಷ್ಯ ತಪ್ಪಾಗುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಯಲವಾರ ರಾಜಕುಮಾರ್, ಪಿಡಿಓ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ ೧೭ ಕೆ.ಎಲ್.ಆರ್. ೦೪ : ಲಕ್ಷಿö್ಮÃಸಾಗರ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೋಡಿಮಠದ ಸ್ವಾಮೀಜಿಗಳ ಜೊತೆ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net