ಕೋಲಾರ ಬರ ಪೀಡಿತ ಜಿಲ್ಲೆಯೆಂದು ಘೋಷಿದಲು ಕಿಸಾನ್ ಸಂಘ ಆಗ್ರಹ /ಪ್ರತಿ ಮಾಹೆ ರೈತರ ಕುಂದು ಕೊರತೆ ಸಭೆ ನಡೆಸಲು ಪಿ.ಶಿವಕುಮಾರ್ ಒತ್ತಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗಿ ನಷ್ಟವಾಗಿದೆ. ಕೂಡಲೇ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿ ನಷ್ಟಗೊಂಡ ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಲ್ಪಿಸಬೇಕೆಂದು, ರಾಜ್ಯ ಸರ್ಕಾರವನ್ನು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚದುಮನಹಳ್ಳಿ ಇ. ಸುಬ್ರಮಣಿ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಪಂಪ್ ಸೆಟ್‌ಗಳು ಸುಟ್ಟು ಹೋಗುತ್ತಿವೆ. ಇದರಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನೀರು ಪೂರೈಕೆ ಇಲ್ಲದಂತಾಗಿ ನಷ್ಟಕ್ಕೆ ಗುರಿಯಾಗಿದ್ದಾರೆ. ಇದರ ಜೂತೆಗೆ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಳು ನಾಶ ಪಡೆಸುತ್ತಿದ್ದರೂ ಸಹ ಸಂಬAಧ ಪಟ್ಟ ಅರಣ್ಯ ಇಲಾಖೆಯು ಯಾವೂದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಶ್ರೀನಿವಾಸಪುರದಲ್ಲಿ ಕಳೆದ ೧೯೩೬ರಲ್ಲಿ ಮಹಾರಾಜರು ಅರಣ್ಯ ಇಲಾಖೆಗೆ ಜಮೀನು ಮಂಜೂರು ಮಾಡಿದ್ದಾರೆ ಎಂದು ರೈತರ ಜಮೀನುಗಳನ್ನು ಅರಣ್ಯ ಇಲಾಖೆ ದೌರ್ಜನ್ಯದಿಂದ ತೆರವು ಕಾರ್ಯಚರಣೆ ಮಾಡಿರುವುದು ಅವೈಜ್ಞಾನಿಕ ಹಾಗೂ ಮಾನವೀಯತೆ ಇಲ್ಲದೆ ಬಡ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಅನಾಗರೀಕ ನಡೆಯಾಗಿದೆ. ಬೆವರು ಹರಿಸಿ ಬೆಳೆದ ಬೆಳೆಗಳನ್ನು ನಾಶ ಪಡೆಸುತ್ತಿದ್ದ ಅರಣ್ಯ ಇಲಾಖೆಯವರನ್ನು ತಡೆಯಲು ಯತ್ನಿಸಿದ ರೈತರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯ ಸರ್ಕಾರ ರೈತನ ಖಾತೆಗೆ ೪ ಸಾವಿರ ರೂ ಪಾವತಿಸದೆ ಬಾಕಿ ಉಳಿಸಿ ಕೊಂಡಿರುವುದು ಕೊಡಲೇ ಬಿಡುಗಡೆ ಮಾಡಬೇಕು, ರೈತರ ಮಕ್ಕಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ರದ್ದು ಪಡೆಸಿರುವುದನ್ನು ಪುನರ್ ಚಾಲನೆ ನೀಡಬೇಕು, ಹೈಸ್ಕೊಲ್ ವಿದ್ಯರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಬೇಕು, ಅಧುನಿಕ ತಂತ್ರಜ್ಞಾನದ ಶಿಕ್ಷಣಕ್ಕೆ ಒತ್ತು ನೀಡಬೇಕು, ಹಾಲಿನ ಬೆಲೆ ಲೀಟರ್‌ಗೆ ೫೦ ರೂ ನಿಗಧಿ ಪಡೆಸಬೇಕು, ರೈತರ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗಧಿ ಪಡೆಸಬೆಕು, ರೈತರ ಮೇಲೆ ದಾಖಲು ಮಾಡಿರುವ ಎಲ್ಲಾ ಕೇಸ್‌ಗಳನ್ನು ವಾಪಸ್ ಪಡೆಯ ಬೇಕು, ಸಮರ್ಪಕವಾಗಿ ೮ ಗಂಟೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು,

ನಿವೃತ್ತ ಡಿ.ವೈ.ಎಸ್.ಪಿ. ಪಿ.ಶಿವಕುಮಾರ್ ಮಾತನಾಡಿ, ಜಿಲ್ಲಾಡಳಿತವು ಎಲ್ಲಾ ಸಮುದಾಯಗಳ, ಸಂಘಟನೆಗಳ ಸಭೆಯನ್ನು ಕರೆದು ಕುಂದು ಕೊರತೆ ಸಭೆಗಳನ್ನು ನಡೆಸುತ್ತಿರುವುದು ಸ್ವಾಗಾತರ್ಹಾವಾಗಿದೆ. ಅದರೆ ಈ ದೇಶದ ಬೆನ್ನಲುಬು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ರೈತರ ಕುಂದು ಕೊರತೆ ಸಭೆಗಳನ್ನು ಏಕೆ ಕರೆಯುತ್ತಿಲ್ಲ. ನಮಗೆ ಯಾವೂದೇ ಜಾತಿ, ಧರ್ಮ ಇಲ್ಲ, ನಾವೆಲ್ಲಾ ರೈತ ಸಮುದಾಯಕ್ಕೆ ಸೇರಿದವರು ಹಾಗೂ ಮುಂದಿನ ದಿನಗಳಲ್ಲಿ ಪ್ರತಿ ಮಾಹೆ ರೈತರ ಕುಂದು ಕೊರತೆ ಸಭೆಗಳನ್ನು ಜಿಲ್ಲಾಧಿಕಾರಿಗಳ ಮಟ್ಟದ ಅಧಿಕಾರಿಗಳ ಸಭೆಗಳನ್ನು ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಕಳೆದ ಅರ್ಧ ಶತಮಾನದಿಂದ ಕೃಷಿ ಮಾಡುತ್ತಿದ್ದ ಭೂಮಿಗಳು ರೈತರಿಗೆ ಸೇರಬೇಕೆ ವಿನಹಾ ಅರಣ್ಯ ಇಲಾಖೆಯದು ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಸರ್ಕಾರದ ಆಸ್ತಿಪಾಸ್ತಿಗಳಿಗೆ ಫೆನ್ಸಿಂಗ್ ಹಾಕಿಕೊಂಡು ಭದ್ರ ಪಡೆಸಿಕೊಳ್ಳ ಬೇಕಾಗಿತ್ತು, ಇಷ್ಟು ದಿನಗಳಿಂದ ತಟಸ್ಥರಾಗಿದ್ದು, ಏಕಾ ಏಕಿ ಯಾವೂದೋ ಕಾಲದ ದಾಖಲೆಗಳು ತಂದು ಒತ್ತುವರಿ ಮಾಡಲಾಗಿದೆ ಎಂದರೆ ಕೇಳುವವರು ಯಾರು. ಪ್ರತಿಯೊಬ್ಬ ರೈತರು ಸರ್ಕಾರದ ಇಲಾಖೆಯು ನೀಡಿರುವಂತ ದಾಖಲೆಗಳನ್ನು ಪಡೆದೇ ಕೃಷಿ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ಗೋಪಾಲರೆಡ್ಡಿ, ನಾರಾಯಣಸ್ವಾಮಿ, ವಕೀಲ ಜಯಪ್ಪ, ರಘುನಾಥ್ ರೆಡ್ಡಿ, ಉಗಣಿ ನಾರಾಯಣಗೌಡ, ಕೋಶಾಧ್ಯಕ್ಷ ವೆಂಕಟರವಣ, ಅಪ್ಪಾಜಿಗೌಡ ಮುಂತಾದವರು ಉಪಸ್ಥಿತರಿದ್ದರು,

ಚಿತ್ರ ೧೩ ಕೆ.ಎಲ್.ಆರ್. ೦೫ : ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಚದುಮನಹಳ್ಳಿ ಇ. ಸುಬ್ರಮಣಿ ಮಾತನಾಡುತ್ತಿರುವುದು. ನಿವೃತ್ತ ಡಿ.ವೈ.ಎಸ್.ಪಿ. ಪಿ.ಶಿವಕುಮಾರ್, ಗೋಪಾಲ್ ರೆಡ್ಡಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net