ಕೋಲಾರ ನಗರಸಭೆಯ ಅಧಿಕಾರಿಗಳ ಎಡವಟ್ಟು / ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ಸೃಷ್ಟಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರಸಭೆಯ ಜನನ ಮತ್ತು ಮರಣ ವಿಭಾಗದ ಅಧಿಕಾರಿಗಳ ಎಡವಟ್ಟಿನಿಂದ ಜೀವಂತ ಇರುವ ವ್ಯಕ್ತಿಗೆ ಆತನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಸಿದ್ಧಪಡಿಸಿರುವ ಪ್ರಕರಣವೊಂದು ಬಯಲಾಗಿದೆ.

ನಗರದ ಕಠಾರಿಪಾಳ್ಯದ ರವಿಕುಮಾರ್ ಎಂಬುವರ ಹೆಸರಿನಲ್ಲಿ ಮರಣ ಪ್ರಮಾಣಪತ್ರ ನೊಂದಣಿ ಆಗಿದೆ. ಆ ಡಿಜಿಟಲ್ ಪ್ರಮಾಣಪತ್ರದಲ್ಲಿ ೨೦೨೫ರ ಜನವರಿ ೨೬ರಂದು ಅವರು ನಿಧನರಾಗಿದ್ದಾರೆ ಎಂದು ನಮೂದಿಸಲಾಗಿದೆ. ಮಾರ್ಚ್ ೪ ರಂದು ನೋಂದಣಿ ಮಾಡಲಾಗಿದೆ.

ರವಿಕುಮಾರ್ ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಅವರ ಸಹೋದರ ಪ್ರಕಾಶ್ ಎಂಬುವರು ನಾಡಕಚೇರಿಗೆ ಸಲ್ಲಿಸಿದ ಅರ್ಜಿ ಪರಿಶೀಲನೆ ವೇಳೆ ಆಧಾರ್ ಸಂಖ್ಯೆ ತಾಳೆಯಿಂದ ಈ ವಿಚಾರ ಗೊತ್ತಾಗಿದೆ. ತಂತ್ರಾAಶದಲ್ಲಿ ಸಂಬAಧಿಸಿದ ವ್ಯಕ್ತಿ ಬದುಕಿಲ್ಲ ಎಂಬ ಸಂದೇಶ ಬಂದಿದೆ.

ಇದರಿಂದ ಗಾಬರಿಗೊಂಡ ಅವರು ಈ ಸಂಬAಧ ಪರಿಶೀಲಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಗೆ ಮನವಿ ಪತ್ರ ನೀಡಿದ್ದಾರೆ. ನಂತರ ಕಚೇರಿಯಲ್ಲಿ ಆಧಾರ್ ಸಂಖ್ಯೆಯನ್ನು ಇ-ಜನ್ಮ ತಂತ್ರಾAಶದಲ್ಲಿ ಪರಿಶೀಲಿಸಿದಾಗ ೨೦೨೫ರ ಜನವರಿ ೨೬ ರಂದು ಕೋಲಾರ ನಗರಸಭಾ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದಾರೆ ಎಂಬ ಅಂಶ ನೋಂದಣಿಯಾಗಿರುವುದು ಕಂಡುಬAದಿದೆ. ಈ ಸಂಬAಧ ಪೂರಕ ಮಾಹಿತಿ ಒದಗಿಸುವಂತೆ ಜುಲೈ ೧೬ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯು ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಇದೊಂದು ಗಂಭೀರ ಲೋಪ ಪ್ರಕರಣವಾಗಿದ್ದು, ಇಂಥ ಪ್ರಮಾಣಪತ್ರ ನೋಂದಾಯಿಸುವಾಗ ಪರಿಶೀಲಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ದೊಡ್ಡ ಎಡವಟ್ಟು ನಡೆದಿದೆ ಎಂದು ನಗರಸಭೆ ಕೆಲ ಸದಸ್ಯರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಕ್ಸ್

ನಗರಸಭೆ ಬದುಕಿಲ್ಲ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಬದುಕಿರುವವರಿಗೆ ಸತ್ತಂಗೆ ಪ್ರಮಾಣಪತ್ರಗಳನ್ನು ಸೃಷ್ಟಿಯಾಗುತ್ತಿವೆ ಎಂದರೆ ಕೋಲಾರ ನಗರದ ಜನತೆಯ ಪಾಲಿಗೆ ನಗರಸಭೆ ಸತ್ತಂಗೆ ಆಗಿದೆ. ಕೋಲಾರ ನಗರದ ರಸ್ತೆಗಳು ಹಾಳಾಗಿವೆ. ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಇದ್ದರೂ ಕೋಲಾರ ನಗರ ಅಭಿವೃದ್ಧಿ ಕಂಡಿಲ್ಲ. ಕಸ ನಗರದಲ್ಲಿ ತಾಂಡವವಾಡುತ್ತಿದೆ. ಕೋಲಾರ ನಗರ ಎಂಬುದಕ್ಕಿAತ ಕಸದ ನಗರ ಎಂದು ನಾಮಕರಣ ಮಾಡುವುದು ಸೂಕ್ತ ಎಂದು ನಾಗರೀಕರು ಆರೋಪಿಸಿದ್ದಾರೆ.

ಕೋಟ್

ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೋಂದಣಿ ಆಗಿರುವ ಬಗ್ಗೆ ದೂರು ಬಂದಿದೆ. ಯಾವ ಉದ್ದೇಶದಿಂದ ಬದುಕಿರುವ ವ್ಯಕ್ತಿಯ ಮರಣ ಪ್ರಮಾಣಪತ್ರ ನೋಂದಣಿ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುವುದು ಮತ್ತು ಮರಣ ಪತ್ರವನ್ನು ರದ್ದುಪಡಿಸಲಾಗುವುದು.

-ನವೀನ್ ಚಂದ್ರ, ನಗರಸಭೆ ಪೌರಾಯುಕ್ತ

ಚಿತ್ರ ೨೬ ಕೆ.ಎಲ್.ಆರ್. ೦೨ : ನಗರಸಭೆ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net