ಕೋಲಾರ ನಗರಸಭೆ ಸದಸ್ಯನ ಗಡಿಪಾರಿಗೆ ಆಗ್ರಹ

12tnpnewsfile02
Published on

ತಿ.ನರಸೀಪುರ: ಕೋಲಾರ ನಗರಸಭೆ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಧಿಕ್ಕಾರದ ಘೋಷಣೆ ಕೂಗಿ ಅಪಮಾನ ಮಾಡಿರುವ ವ್ಯಕ್ತಿ ವಿರುದ್ಧ ರಾಷ್ಟ್ರದ್ರೋಹಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯು ತಹಸೀಲ್ದಾರ್ ಸಿ.ಜೆ.ಗೀತಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಸಮಿತಿಯ ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ಆರ್.ರಾಜು ಮಾತನಾಡಿ, ಕೋಲಾರ ನಗರಸಭೆ ಸದಸ್ಯ ಅಂಬರೀಷ್ ಎಂಬಾತ ಅಂಬೇಡ್ಕರ್ ಪರಿನಿರ್ವಾಣ ದಿನದಂದು ಸಾರ್ವಜನಿಕವಾಗಿ ಧಿಕ್ಕಾರದ ಘೋಷಣೆ ಕೂಗಿ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ದರಿಂದ ಈತನ ವಿರುದ್ಧ ಕಾನೂನು ರೀತ್ಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ನಗರಸಭೆ ಸದಸ್ಯ ಸ್ಥಾನದಿಂದ ವಜಾ ಮಾಡಿ ದೇಶದಿಂದಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಸಮಿತಿಯ ಸಂಘಟನಾ ಸಂಚಾಲಕರಾದ ಮನೋಜ್‌ಕುಮಾರ್, ಜಿಲ್ಲಾ ವಿಭಾಗೀಯ ಸಂಚಾಲಕ ಕನ್ನಾಯಕನಹಳ್ಳಿ ಮರಿಸ್ವಾಮಿ, ತಾಲೂಕು ಸಂಚಾಲಕ ಮಾದಿಗಹಳ್ಳಿ ಮಹೇಶ್, ತೊಟ್ಟವಾಡಿ ರಾಜಪ್ಪ, ನಿಲಸೋಗೆ ಕುಮಾರ್, ಸೋಸಲೆ ಎಸ್.ವಿ.ಮಹೇಶ್, ಟೌನ್ ಸಂಚಾಲಕ ಶ್ರೀರಾಂಪುರ ಗಿರೀಶ್, ವಿನಯ್ ಕುಮಾರ್, ತೊಟ್ಟವಾಡಿ ಮಹದೇವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net